ಸಾಕಷ್ಟು ಜನರಲ್ಲಿ ಈ ಮೈಗ್ರೇನ್ ಅನ್ನೋದು ತೀರಾ ಸಹಜವಾದದ್ದಾಗಿದೆ. ಸ್ವಲ್ಪ ಯೋಚನೆ ಮಾಡಿದ್ರು ಎರಡು ದಿನದ ನಿದ್ದೆಯನ್ನೇ ಈ ತಲೆನೋವು ಹಾಳು ಮಾಡಿಬಿಡುತ್ತದೆ. ಅಷ್ಟು ಕೆಟ್ಟ ಫೀಲ್ ಕೊಡಲಿದೆ. ಇತ್ತೀಚಿನ ಜೀವನ ಶೈಲಿಯೂ ಇದಕ್ಕೆ ಕಾರಣ. ಒತ್ತಡದಿಂದಾನೂ ಕೆಲವೊಬ್ಬರಿಗೆ ಮೈಗ್ರೇನ್ ತರಿಸುತ್ತದೆ. ಅದಷ್ಟೇ ಅಲ್ಲ ನಮ್ಮ ಜೀವನದಲ್ಲಿ ನಮ್ಮ ಆರೋಗ್ಯ ಹೇಗಿದೆ ಎಂಬುದರ ಮೇಲೂ ಮೈಗ್ರೇನ್ ಬರಲಿದೆ.

* ತಜ್ಞರು ಹೇಳುವ ಪ್ರಕಾರ ಮಲಬದ್ಧತೆ ಸಮಸ್ಯೆ ಇರುವವರಲ್ಲಿಯೂ ಈ ಮೈಗ್ರೇನ್ ಸಮಸ್ಯೆ ಶುರುವಾಗಲಿದೆ. ಅಂದ್ರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ, ಚಯಪಜಯ ಕ್ರಿಯೆ ಸರಿಯಾಗಿ ಆಗದೆ ಹೋದಲ್ಲಿ ಈ ಮೈಗ್ರೇನ್ ಗೆ ಕಾರಣವಾಗಬಹುದು.

* ಖಾಲಿ ಹೊಟ್ಟೆ ಹೆಚ್ಚು ಸಮಯ ಬಿಟ್ಟಾಗಲೂ ಸಮಸ್ಯೆಯಾಗುತ್ತದೆ. ಕರುಳಿನ ಸುತ್ತಲೂ ಗ್ಯಾಸ್ ಫಿಲ್ ಆಗುತ್ತದೆ. ಇದರಿಂದಾನೂ ಮೈಗ್ರೇನ್ ಬರಲಿದೆ.
* ಅಷ್ಟೇ ಅಲ್ಲ ಖಾಲಿ ಹೊಟ್ಟೆ ಬಿಡೋದ್ರಿಂದ ಕ್ರಿಯೇಟ್ ಆಗುವ ಗ್ಯಾಸ್ಟ್ರಿಕ್ ನೇರವಾಗಿ ತಲೆಗೆ ಹೊಡೆಯೋದ್ರಿಂದ ಅರ್ಧ ತಲೆ ನೋವು ಶುರುವಾಗಲಿದೆ.
* ಮೈಗ್ರೇನ್ ಎರಡು ರೀತಿಯಲ್ಲಿ ಬರಲಿದೆ. ಒಂದು ಶೀತದಿಂದ ಮತ್ತೊಂದು ಉಷ್ಣದ ಮೈಗ್ರೇನ್
* ಶೀತದಿಂದ ಬರುವಂತ ಮೈಗ್ರೇನ್ ಗೆ ತುಂಬೆ ಹೂವಿನ ಎಲೆಗಳನ್ನ ಕಿತ್ತು, ಅದರ ರಸವನ್ನ ಮೂಗಿನ ಬಳಿ ಹಿಡಿದು, ಅದರ ಸ್ಮೆಲ್ ತೆಗೆದುಕೊಳ್ಳುವುದರಿಂದ ಸ್ವಲ್ಪ ಕಡಿಮೆಯಾಗಲಿದೆ (ಆ ಹನಿಯನ್ನು ಎರಡು ಮೂಗಿನ ಒಳಗೆ ಹಾಕಲು ಹಲವು ಸೂಚಿಸುತ್ತಾರೆ. ಆದರೆ ಅನುಭವವಿಲ್ಲದೆ ಹಾಕಿದರೆ ಅದರಿಂದ ಅಪಾಯವೂ ಹೆಚ್ಚು. ಹೀಗಾಗಿ ಅದರ ಸ್ಮೆಲ್ ನೋಡುವುದರಿಂದಾನು ಕಡಿಮೆಯಾಗಲಿದೆ ಎನ್ನುತ್ತಾರೆ ಹಲವರು)
* ಆದಷ್ಟು ಜೀರ್ಣಕ್ರಿಯೆ ಸಲೀಸಾಗಲೂ ನೋಡಿಕೊಳ್ಳಿ. ಮಲಬದ್ಧತೆ ಇದ್ದರೆ ನೂರೆಂಟು ಕಾಯಿಲೆಗಳು ಕಾಣಿಸಿಕೊಳ್ಳಲಿವೆ.

