Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸ್ತಾವೇಜು ಬರಹಗಾರರ ಸಂಘ ಬಲಪಡಿಸಿ : ತಿಪ್ಪೇರುದ್ರಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 28 : ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ಅಡ್ಡಾಡಿ ಕೆಲಸ ಮಾಡುವ ಮೂಲಕ ಸಂಘಟಿಸಿ ದಸ್ತಾವೇಜು ಬರಹಗಾರರ ಸಂಘವನ್ನು ಬಲಪಡಿಸುವಂತೆ ಉಪ ನೊಂದಣಾಧಿಕಾರಿ ತಿಪ್ಪೇರುದ್ರಪ್ಪ ಪತ್ರ ಬರಹಗಾರರಿಗೆ ಕರೆ ನೀಡಿದರು.

ಐಶ್ವರ್ಯ ಫೋರ್ಟ್‍ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಸಮಾವೇಶ ಹಾಗೂ 2026 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಅಲ್ಪ ಅವಧಿಯಲ್ಲಿಯೇ ಸಮಾವೇಶ ನಡೆಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿರುವುದು ನೋಡಿದರೆ ದಸ್ತಾವೇಜು ಬರಹಗಾರರ ಸಂಘದಲ್ಲಿ ಒಗ್ಗಟ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಸ್ತಾವೇಜು ಬರಹಗಾರರ ಸಂಘದ ಅಧ್ಯಕ್ಷ ಎಸ್.ರುದ್ರಸ್ವಾಮಿ ಮಾತನಾಡಿ ಉಪ ನೊಂದಣಾಧಿಕಾರಿ ತಿಪ್ಪೇರುದ್ರಪ್ಪನವರ ಸಲಹೆ ಮಾರ್ಗದರ್ಶನದಂತೆ ಸಂಘವನ್ನು ಬೆಳೆಸಿ ಮುಂದಿನ ದಿನಗಳಲ್ಲಿ ಬಲಪಡಿಸೋಣ. ಅಲ್ಪ ಅವಧಿಯಲ್ಲಿಯೇ ಕ್ಯಾಲೆಂಡರ್ ಸಿದ್ದಪಡಿಸಿ ದಸ್ತಾವೇಜು ಬರಹಗಾರರ ಸಮಾವೇಶ ನಡೆಸಲು ನನ್ನೊಬ್ಬನಿಂದ ಸಾಧ್ಯವಾಗುತ್ತಿರಲಿಲ್ಲ. ಜಿಲ್ಲೆಯ ಎಲ್ಲಾ ಬರಹಗಾರರು ಕೈಜೋಡಿಸಿದ್ದಾರೆಂದು ಸ್ಮರಿಸಿದರು.

ದೇವರಾಜ್ ಮಾತನಾಡುತ್ತ ಚಿತ್ರದುರ್ಗದಲ್ಲಿ ಬರಹಗಾರರ ದಸ್ತಾವೇಜು ಸಂಘ ಹುಟ್ಟುಕೊಂಡು ಕೇವಲ ಮೂರು ವರ್ಷವಾಗಿದೆ. ನಮ್ಮಲ್ಲಿ ಸಂಘಟನೆ ಒಗ್ಗಟ್ಟಿಲ್ಲದ ಕಾರಣಕ್ಕೆ ಪ್ರತಿಯೊಬ್ಬರು ಪತ್ರ ಬರಹಗಾರರಾಗಿದ್ದಾರೆ. ಕಟ್ ಅಂಡ್ ಪೇಸ್ಟ್ ಆಗುತ್ತಿರುವುದನ್ನು ಮೊದಲು ನಿಯಂತ್ರಿಸಬೇಕೆಂದು ಉಪ ನೊಂದಣಾಧಿಕಾರಿಯವರಲ್ಲಿ ಮನವಿ ಮಾಡಿದರು.
ಹಿರಿಯೂರಿನ ಸುಧಾಕರ್ ಮಾತನಾಡಿ ಪತ್ರ ಬರಹ ಬ್ರಿಟೀಷರ ಕಾಲದ್ದು, ಉಪ ನೊಂದಣಾಧಿಕಾರಿ ಕಚೇರಿಗೆ ಪತ್ರ ಬರಹಗಾರರು ರಾಯಬಾರಿಗಳಿದ್ದಂತೆ. ಪತ್ರ ಬರವಣಿಗೆಯಿಂದ ಅನುಭವವಿದ್ದರೆ ಎಲ್ಲಾ ಕಡೆ ಗೌರವ ಸಿಗುತ್ತದೆ. ಎಲ್ಲರೊಂದಿಗೂ ಪತ್ರ ಬರಹಗಾರರು ಹೊಂದಿಕೊಳ್ಳಬೇಕು. ಪತ್ರ ಬರಹಗಾರರೆಂದರೆ ಸೇವೆಯಿದ್ದಂತೆ. ದಂಧೆಯಲ್ಲ. ಯಾರಿಗೂ ಮೋಸವಾಗಬಾರದೆಂದು ಹೇಳಿದರು.

ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಉಪಾಧ್ಯಕ್ಷರುಗಳಾದ ಎಸ್.ಬಿ.ಸೋಮಶೇಖರಪ್ಪ, ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೆಂಚಪ್ಪ, ಖಜಾಂಚಿ ಎಸ್.ಎಂ.ಬಸವರಾಜ್ ಸೇರಿದಂತೆ ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮಂಜುನಾಥಗುಪ್ತ ಕಾರ್ಯಕ್ರಮ ನಿರೂಪಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಗ್ರಾಮೀಣ ಜನತೆಗೆ ಸಿಹಿ ಸುದ್ದಿ: ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ‘ಒಸಿ’ ವಿನಾಯಿತಿ ನೀಡಿ ಸರ್ಕಾರ ಆದೇಶ

ಮೋದಿ ಸರ್ಕಾರಕ್ಕೆ 12 ವರ್ಷ ಪೂರ್ಣ: ಚಿತ್ರದುರ್ಗದ ನೀಲಕಂಠೇಶ್ವರ ಸನ್ನಿಧಿಯಲ್ಲಿ ನಮೋ ಹೆಸರಲ್ಲಿ ವಿಶೇಷ ಪೂಜೆ

ದೇಹದ ಸದೃಢತೆಗೆ ಸಸ್ಯಾಹಾರಿಗಳು ಸೇವಿಸಬೇಕಾದ ಪ್ರೋಟೀನ್ ಯುಕ್ತ ಆಹಾರಗಳಿವು

ವಿಶ್ವ ನಾಯಕ ನರೇಂದ್ರ ಮೋದಿಯವರ 12 ವರ್ಷಗಳ ಸೇವೆಗೆ ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ

ಜೂನ್ 21ರಂದು ಕೋಟೆನಾಡಿನಲ್ಲಿ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆ : ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಒತ್ತಡ ಮುಕ್ತ ಜೀವನಕ್ಕೆ ಯೋಗ ಪ್ರಸ್ತುತ

ಗಣಿಬಾಧಿತ ಗ್ರಾಮಗಳ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೈನುರಾಸು ಕಾರ್ಯಕ್ರಮದಡಿ ಆರ್ಥಿಕ ನೆರವು : ಜೂನ್ 22 ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ