ಬೇಸಿಗೆ ಕಾಲ ಈಗಾಗಲೇ ಶುರುವಾಗಿದೆ. ಶಿವರಾತ್ರಿ ಬಂದು ಚಳಿ ಶಿವ ಶಿವ ಅಂತ ಹೋಗುತ್ತೆ. ಆಮೇಲೆ ಬೇಸಿಗೆ ಕಾಲ ಶುರುವಾಗುವುದು ಹಿಂದಿನ ಕಾಲದಿಂದಾನೂ ಬಂದಿರುವ ವಾಡಿಕೆ. ಆದರೆ ಈ ಬಾರಿ ವಾಡಿಕೆಗಿಂತ ಬಹಳ ಬೇಗನೆ ಬೇಸಿಗೆ ಶುರುವಾಗಿದೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೇನೆ ಗಂಟಲು ಒಣಗುತ್ತೆ, ಬೆವರು ಕಿತ್ತುಕೊಳ್ಳುವುದಕ್ಕೆ ಶುರುವಾಗಿದೆ. ಕಣ್ಣಿಗೆ ರಾಚುವಂತೆ ಎಳನೀರೇನೋ ಕಾಣಿಸುತ್ತೆ, ಜೇಬು ಸುಡುವಷ್ಟು ರೇಟು ಆಗಿದೆ. ಆದರೆ ಈ ಬೇಸಿಗೆಯ ಧಗೆ ಸಹಿಸಿಕೊಳ್ಳುವುದಕ್ಕೆ ಕಲ್ಲಂಗಡಿ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಕಲ್ಲಂಗಡಿ ತಿನ್ನುವವರು ಬೀಜವನ್ನ ಅಷ್ಟೇ ಈಸಿಯಾಗಿ ಉಗಿದು ಬಿಡುತ್ತಾರೆ. ಇನ್ಮುಂದೆ ಹಾಗೇ ಮಾಡಬೇಡಿ. ಯಾಕಂದ್ರೆ ಅದರಲ್ಲೂ ರಿಚ್ ವಿಟಮಿನ್ಸ್ ಗಳು ಇದಾವೆ.

* ಆ ಬೀಜಗಳಿಂದ ಏನೆಲ್ಲಾ ಲಾಭಗಳಾಗುತ್ತವೆ ಅನ್ನೋದನ್ನ ಹೇಳ್ತೀವಿ. ಅದಕ್ಕೂ ಮುನ್ನ ಆ ಬೀಜಗಳನ್ನ ಹೇಗೆ ಶೇಖರಣೆ ಮಾಡಬೇಕು ಎಂಬುದನ್ನು ತಿಳಿದುಕೊಂಡು ಬಿಡಿ. ಮೊದಲು ಬೀಜಗಳನ್ನ ಶೇಖರಿಸಿಟ್ಟುಕೊಂಡು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ. ಬಳಿಕ ಅದರ ಮೇಲಿನ ಸಿಪ್ಪೆ ತೆಗೆದು, ಒಳಗಿನ ಪಲ್ಪ್ ಅನ್ನು ತಿನ್ನಿ. ಈಗ ಅದರಿಂದಾಗುವ ಲಾಭಗಳೇನು ಎಂಬುದನ್ನು ಓದಿ.

* ಈ ಕಲ್ಲಂಗಡಿ ಬೀಜಗಳು ಕ್ಯಾಲ್ಸಿಯಂ ರಿಚ್ ಇರುವಂಥದ್ದು. ಯಾರಿಗೆ ಮೂಳೆಯ ಸಮಸ್ಯೆ ಇದೆ, ಕೀಲು ನೋವುಗಳು ಬರುತ್ತವೆ, ಕುಳಿತು ಎದ್ದರೆ ಕಟಕಟ ಎಂಬ ಸೌಂಡ್ ಮಾಡುತ್ತವೆ. ಭುಜ ನೋವು, ಸೊಂಟ ನೋವು ಇರುವವರು ಈ ಬೀಜಗಳನ್ನ ತಿನ್ನುವುದರಿಂದ ಮೂಳೆಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕ್ಯಾಲ್ಸಿಯಂ ಮಾತ್ರೆಗಳನ್ನ ತೆಗೆದುಕೊಳ್ಳುವ ಬದಲು ಕಲ್ಲಂಗಡಿ ಬೀಜಗಳನ್ನ ಹಣ್ಣಿನ ಜೊತೆಗೆ ಸೇವಿಸಿದರೆ ಕಾಲು ನೋವಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

