ಬೆಂಗಳೂರು: ಮದ್ಯ ಪ್ರಿಯರಿಗೆ ಬಾರ್ ಅಂಡ್ ರೆಸ್ಟೊರೆಂಟ್ ಮಾಲೀಕರಿಂದ ಕಹಿ ಸುದ್ದಿಯೊಂದು ಸಿಕ್ಕಿದೆ. ನಾಳೆ ಮದ್ಯ ಬೇಕು ಎಂದು ಬಯಸುವವರಿಗೆ ಮದ್ಯ ಸಿಗೋದೆ ದೊಡ್ಡ ಅನುಮಾನವಾಗಿದೆ. ಯಾಕಂದ್ರೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು, ಮಾಡಿರುವ ನಿಯಮಗಳಿಂದ ಆಕ್ರೋಶಗೊಂಡಿದ್ದು, ಬಾರ್ ಗಳನ್ನ ಬಂದ್ ಮಾಡಲು ನಿರ್ಧಾರ ಮಾಡಿದೆ. ಹೀಗಾಗಿ ನಾಳೆ ರಾಜ್ಯಾದ್ಯಂತ ಬಾರ್ ಗಳು ಬಂದ್ ಆಗಲಿವೆ.
ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ಏರಿಕೆ ಮಾಡ್ತಾ ಇದೆ. ಈಗ ನೋಡಿದ್ರೆ, ಬಾರ್, ರೆಸ್ಟೋರೆಂಟ್, ಕ್ಲಬ್ ಗಳ ಶುಲ್ಕವನ್ನು ದುಪ್ಪಟ್ಟು ಮಾಡಿದೆ. ಕಳೆದ ಎರಡು ವರ್ಷಗಳಿಂದಾನೂ ಮದ್ಯದ ಬೆಪೆಯನ್ನು ಏರಿಕೆ ಮಾಡ್ತಾ ಇದೆ. ಈಗ ಲೈಸೆನ್ಸ್ ಬೆಲೆಯೂ ಹೆಚ್ಚಳ ಮಾಡಿರುವುದನ್ನು ವಿರೋಧಿಸಿರುವ ಬಾರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಪದೇ ಪದೇ ಹೀಗೆ ಬೆಲೆ ಜಾಸ್ತಿ ಮಾಡುತ್ತಿರುವ ಸರ್ಕಾರದ ವಿರುದ್ಧ ಬಾರ್ ಮಾಲೀಕರು ಸಿಡಿದೆದ್ದಿದ್ದು, ಪ್ರತಿಭಟನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ.
ಅಷ್ಟೇ ಅಲ್ಲ ಸರ್ಕಾರಿ ಸಂಸ್ಥೆಗಳಿಂದ ಮದ್ಯವನ್ನು ಖರೀದಿ ಮಾಡದೆ ಇರುವುದಕ್ಕೆ ಬಾರ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಕರ್ನಾಟಕ ವೈನ್ ವ್ಯಾಪಾರಿಗಳ ಸಂಘ, ನ್ಯಾಷಬಲ್ ರೆಸ್ಟೋರೆಂಟ್ ಅಸೋಸಿಯೇಷನ್, ಕರ್ನಾಟಕ ಬ್ರೂವರಿ ಹಾಗೂ ಡಿಸ್ಟಿಲರೀಸ್ ಸಂಘವೂ ಜೊತೆಯಾಗಿ ಈ ನಿರ್ಧಾರ ಮಾಡಿದೆ. ಕರ್ನಾಟಕದಲ್ಲಿ ಸದ್ಯಕ್ಕೆ 12 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಸರ್ಕಾರದಜಂದ ಲೈಸೆನ್ಸ್ ಪಡೆದು ಮದ್ಯ ಮಾರಾಟ ಮಾಡುತ್ತಿರುವ ಬಾರ್ ಗಳಾಗಿವೆ. ಹೀಗೆ ಸರ್ಕಾರದ ನಿರ್ಧಾರದ ವಿರುದ್ಧ ನಿಂತ ಬಾರ್ ಮಾಲೀಕರು ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ. ಬಹುತೇಕ ನಾಳೆ ಮದ್ಯ ಸಿಗುವುದು ಅನುಮಾನವಾಗಿದೆ.






