ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 16 : ದುರ್ಗಾ ಇಲೆವೆನ್ ಕ್ರಿಕೇಟರ್ಸ್‍ವತಿಯಿಂದ 4ನೇ ಬಾರಿಗೆ ರಾಜ ವೀರ ಮದಕರಿ ನಾಯಕ ಕಪ್ 2025 ಲೀಗ್ ಕಮ್ ನಾಕೌಟ್ ಪಂದ್ಯಾವಳಿಯೂ ನಗರದ ಹಳೇ ಮಾದ್ಯಮಿಕ ಶಾಲಾ ಅವರಣದಲ್ಲಿ ಡಿ. 17 ರಿಂದ 21ರವರೆಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಹೊನಲು-ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಸಿ.ಬಿ.ನಾಗರಾಜ್ ತಿಳಿಸಿದ್ದಾರೆ.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸ್ನೇಹಜೀವಿ ಬಳಗದವತಿಯಿಂದ ಇದು ನಾಲ್ಕನೇ ಬಾರಿ ಟೂರ್ನಮೆಂಟ್ ನಡೆಯುತ್ತಿದ್ದು, ಇದರಲ್ಲಿ ಪ್ರಥಮ ಬಹುಮಾನ 2,00,001 ರೂ, ದ್ವೀತೀಯ ಬಹುಮಾನ 1,00,001 ರೂ. ಹಾಗೂ ತೃತೀಯ ಬಹುಮಾನ 50,001 ರೂ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು, ಇದ್ದಲ್ಲದೆ ಉತ್ತಮ ಬ್ಯಾಟ್ಸ್‍ಮನ್ ಹಾಗೂ ಬೌಲರ್‍ಗೆ ಟ್ರೋಫಿಯನ್ನು ನೀಡಲಾಗುವುದು, ಸರಣಿ ಶ್ರೇಷ್ಠ ಪಡೆದವರಿಗೆ ಎಲ್‍ಇಡಿ ಟಿ.ವಿ.ಯನ್ನು ನೀಡಲಾಗುವುದು ಎಂದರು.
ಇದು ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ರಾಜ್ಯದ ವಿವಿಧೆಡೆಗಳಿಂದ 43 ತಂಡಗಳು ಭಾಗವಹಿಸಲಿದ್ದು, 5 ದಿನಗಳಲ್ಲಿ ಇವುಗಳು 115 ಮ್ಯಾಚ್‍ಗಳನ್ನು ಆಡಲಿದ್ದಾರೆ. ಹೂರ ಜಿಲ್ಲೆಗಳಿಂದ 17 ತಂಡ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ 26 ತಂಡಗಳು ಭಾಗವಹಿಸಲಿವೆ, ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಡಿ.17ರ ಬೆಳಿಗ್ಗೆ 8 ಗಂಟೆಗೆ ಡಾ. ಬಸವಕುಮಾರ್ ಶ್ರೀಗಳು ಪಂದ್ಯಾವಳಿಯನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಗೋಪಾಲಸ್ವಾಮಿ ನಾಯಕ್, ರಾಜೀವ, ನಾಗರಾಜ್, ಹನೀಫ್, ರಾಮು, ಅರ್ಜುನ್, ಕೃಪಾಕರ, ಲಕ್ಷ್ಮೀಕಾಂತ, ಬಾಬು ಎನ್.ಕೆ.ಗಾಂಧಿ ಭಾಗವಹಿಸಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್