Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕದಲ್ಲಿ ಹೊಸ ಒಳ ಮೀಸಲಾತಿಯಡಿ 56,432 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

---Advertisement---

ಸುದ್ದಿಒನ್,ಬೆಂಗಳೂರು,ಮೇ.14: ರಾಜ್ಯ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಒಳಮೀಸಲಾತಿ ಗೊಂದಲಗಳಿಗೆ ತೆರೆ ಎಳೆಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘400 ಬಿಂದುಗಳ ರೋಸ್ಟರ್’ (400-Point Roster) ವ್ಯವಸ್ಥೆಯನ್ನು ಜಾರಿಗೆ ತಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,432 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯು ಈಗ ಜಾರಿಗೆ ಬಂದಿರುವ ಹೊಸ ರೋಸ್ಟರ್ ವ್ಯವಸ್ಥೆಯ ಅಡಿಯಲ್ಲೇ ನಡೆಯಲಿದೆ. ವಿಶೇಷವೆಂದರೆ, ಹಳೆಯ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದ್ದು, ಹೊಸ ಮಾರ್ಗಸೂಚಿಯಂತೆ ಶೀಘ್ರದಲ್ಲೇ ಮರು ಅಧಿಸೂಚನೆ ಹೊರಡಿಸಲಾಗುವುದು.

ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಹಂಚಿಕೆ ಹೀಗಿದೆ:

ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಪ್ರಸ್ತುತ SC ಮೀಸಲಾತಿಯನ್ನು ಶೇ. 15ಕ್ಕೆ ಸೀಮಿತಗೊಳಿಸಲಾಗಿದೆ. ಇದರ ಅಡಿಯಲ್ಲಿ ವರ್ಗೀಕರಿಸಲಾದ ಒಳಮೀಸಲಾತಿ ವಿವರ ಇಲ್ಲಿದೆ:

ಪರಗಣ-ಎ (Category-A): ಶೇ. 5.25

ಪರಗಣ-ಬಿ (Category-B): ಶೇ. 5.25

ಪರಗಣ-ಸಿ (Category-C): ಶೇ. 4.5

ಲಂಬ ಮೀಸಲಾತಿಯ ಜೊತೆಗೆ ಸಮತಳ ಮೀಸಲಾತಿಗೂ (Horizontal Reservation) ಇದೇ ಪದ್ಧತಿಯನ್ನು ಅನ್ವಯಿಸಲಾಗುತ್ತದೆ.ಹಿಂದಿನ ನೇಮಕಾತಿ ಪ್ರಕ್ರಿಯೆಯು ಯಾವ ರೋಸ್ಟರ್ ಬಿಂದುವಿಗೆ (Point) ಮುಕ್ತಾಯಗೊಂಡಿತ್ತೋ, ಅಲ್ಲಿಂದಲೇ ಹೊಸ ನೇಮಕಾತಿ ಬಿಂದು ಆರಂಭವಾಗಲಿದೆ.ರಾಜ್ಯದ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಇನ್ನು ಮುಂದೆ ನಡೆಯುವ ನೇರ ನೇಮಕಾತಿಗಳಲ್ಲಿ ಈ 400 ಬಿಂದುಗಳ ರೋಸ್ಟರ್ ಅನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸೂಚಿಸಿದೆ.

Join WhatsApp

Join Now

Join Telegram

Join Now