ಚಾಮರಾಜನಗರ: ಮುಂದಿನ ಚುನಾವಣೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ನಡೆಯುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಪ್ರವಾಸದಲ್ಲಿದ್ದಾಗ ಹೇಳಿದ್ರು. ಇದೀಗ ಅದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಎಸ್ ಟಿ ಸೋಮಶೇಖರ್, ಕೇಂದ್ರ ಗೃಹ ಸಚಿವರ ಮಾತೇ ಅಂತಿಮ ಎಂದಿದ್ದಾರೆ.
ಅಮಿತ್ ಶಾ ಅವರು ಹೇಳಿದಂತೆ 2023ರ ವಿಧಾನಸಭಾ ಚುನಾವಣೆ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲೆ ನಡೆಯಲಿದೆ. ಅಷ್ಟೇ ಅಲ್ಲ ಬೊಮ್ಮಾಯಿ ಅವರು ಬಹಳ ಬುದ್ಧಿವಂತ ಹಾಗೂ ಸಮರ್ಥರಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತಾರೆ.
ಬೊಮ್ಮಾಯಿ ನೇತೃತ್ವದಲ್ಲಿ 2023ರಲ್ಲಿ ಮತ್ತೆ ಸರ್ಕಾರ ರಚಬೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ವಿಶ್ವಾಸ ವ್ಯಕ್ತಪಡಿಸಿದ್ರು. ಬೊಮ್ಮಾಯಿ ಅವರು ಈಗಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಸರ್ಕಾರ ನಡೆಸುತ್ತಿದ್ದಾರೆ. ಹೀಗಾಗಿ ಮುಂದೆಯೂ ಅವರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತೆ, ಚುನಾವಣೆಯೂ ನಡೆಯುತ್ತೆ. ಅದಕ್ಕೆ ನಮ್ಮ ಬೆಂಬಲವೂ ಇರುತ್ತೆ ಎಂದಿದ್ದಾರೆ.