Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್ಎಸ್ಎಲ್ಸಿ ತೃತೀಯ ಭಾಷೆ ಪರೀಕ್ಷೆ ಮುಂದೂಡಿಕೆ..!

---Advertisement---

ಬೆಂಗಳೂರು : ಎಸ್ಎಸ್ಎಲ್ಸಿ ಮಕ್ಕಳಿಗೆ ಈಗೊಂದು ಖುಷಿ ಸುದ್ದಿಯೂ ಹೌದು. ಪರೀಕ್ಷೆಗೆ ತಯರಾದ ಮಕ್ಕಳಿಗೆ ಮತ್ತಷ್ಟು ಸಮಯ ಸಿಕ್ಕರೆ ಸ್ವಲ್ಪ ಸಮಾಧಾನವಾಗುತ್ತೆ. ಈಗಾಗಲೇ ದಿನಾಂಕ ಪ್ರಕಟವಾಗಿದ್ದ ಪರೀಕ್ಷೆಯೊಂದು ಮುಂದೂಡಿಕೆಯಾಗಿದೆ. ಮಹಾವೀರ ಜಯಂತಿ ರಜೆ ಬಂದ ಹಿನ್ನೆಲೆ ಆ ದಿನದ ಪರೀಕ್ಷೆಯನ್ನು ಮುಂದೂಡುವಂತ ತೀರ್ಮಾನವನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.

ಸರ್ಕಾರಿ ರಜೆ ಹಿನ್ನೆಲೆ ಎಸ್ಎಸ್ಎಲ್ಸಿ ತೃತೀಯ ಭಾಷೆಯ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ಒಂದು ದಿನ ಆದ್ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ. ಅಂದ್ರೆ ಮಾರ್ಚ್ 30ರ ಬದಲಾಗಿ ಈ ಮಾರ್ಚ್ 31ಕ್ಕೆ ಮಾಡಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಈ ತೀರ್ಮಾನ ಮಾಡಿದೆ. ಈ ಸಂಬಂಧ ಶಾಲೆಯ ಮೂಲಕ ಮಕ್ಕಳಿಗೆ ವಿಚಾರವನ್ನು ತಿಳಿಸಲಿದ್ದಾರೆ.

ಸಾಲು ಸಾಲು ರಜೆಗಳು ಬಂದಿವೆ. ಮೊದಲು ನಾಲ್ಕನೇ ಶನಿವಾರ, ಆಮೇಲೆ ಭಾನುವಾರ, ನಂತರ ಮಹಾವೀರ ಜಯಂತಿ ಇರುವ ಕಾರಣ ಮಾರ್ಚ್ 31ರಂದು ಮೂರನೇ ಭಾಷೆ ಹಿಂದಿ ಭಾಷೆಯ ಪರೀಕ್ಷೆಯನ್ನ ಮುಂದೂಡಲಾಗಿದೆ. ಈ ಮೊದಲು ಈ ರಜೆಯ ಬಗ್ಗೆಯೇ ಒಂದಷ್ಟು ಗೊಂದಲವಿತ್ತು. ಆದರೆ ಸರ್ಕಾರ ರಜಾ ದಿನಗಳನ್ನು ನೋಡದೆ, ಗಮನಿಸದೆಯೇ ಪರೀಕ್ಷಾ ದಿನಾಂಕಗಳನ್ನ ಹೇಗೆ ಹಾಕಿದೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ನಾಲ್ಕೈದು ದಿನಗಳ ಮೊದಲೇ ಹೇಳುತ್ತಿರುವ ಕಾರಣ ಮಕ್ಕಳ ಮಾನಸಿಕ ಶಕ್ತಿ ಮೇಲೆ ತುಂಬಾ ಏನು ನೆಗೆಟಿವ್ ಪ್ರಭಾವ ಬೀರಲ್ಲ. ನಾಳೆ ಪರೀಕ್ಷೆ ಅಂತ ರೆಡಿಯಾಗಬೇಕಾದಾಗ ಹೀಗೆ ತತ್ ಕ್ಷಣದಲ್ಲಿ ಹೇಳಿ ಬಿಟ್ಟರೆ ಅವೆಲ್ಲಾ ದೊಡ್ಡ ಪರಿಣಾಮವನ್ನ ಬೀರುವಂತೆ ಆಗುತ್ತದೆ. ತೃತೀಯ ಭಾಷೆಯ ಪರೀಕ್ಷೆ ಆಗಿರೋ ಕಾರಣ ಇನ್ನಷ್ಟು ಸಮಯವೂ ಮಕ್ಕಳಿಗೆ ಸಿಕ್ಕಂತೆ ಆಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now