ಬೆಂಗಳೂರು: ತೃತೀಯ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಮಾರ್ಕ್ಸ್ ಬದಲಿಗೆ ಗ್ರೇಡ್ ಕೊಡುವ ನಿರ್ಧಾರ ಮಾಡಿದ್ದರು. ಇದಕ್ಕೆ ಹಲವರ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಎಳೆಯಲು ನಿರ್ಧಾರ ಮಾಡಲಾಗಿದೆ. ನಾಳೆ ತೃತೀಯ ಭಾಷೆಗಳ ಅಂಕಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಮಾತನ್ನಾಡಿರುವ ಮಧು ಬಂಗಾರಪ್ಪ ಅವರು, ಮೌಲ್ಯ ಮಾಪನ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಅಂಕಗಳನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಪ್ರಕ್ರಿಯೆ ಎಂದು ತಿಳಿದಿದೆ. ನಾಳೆ ಮಧ್ಯಾಹ್ನದ ಒಳಗೆ ವಿದ್ಯಾರ್ಥಿಗಳಿ ತಮ್ಮ ಅಂಕವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಆಯಾ ಶಾಲಾ ಲಾಗಿನ್ ಬಳಸಿ, ನಾಳೆ ಅಂಕಗಳನ್ನು ಪರಿಶೀಲನೆ ಮಾಡಬಹುದು. ಫಲಿತಾಂಶ ವಿಳಂಬದಿಂದಾಗಿ ಮಕ್ಕಳ ಮುಂದಿನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದೆಂದು ಇಲಾಖೆ ತಿಳಿಸಿದೆ.
















