Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ : ಏನಂದ್ರು ಸಚಿವ ಮಧು ಬಂಗಾರಪ್ಪ..?

---Advertisement---

ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಶುರುವಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ, ಪೆನ್ ಗಳನ್ನು ನೀಡಿ ಶುಭಕೋರಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಆಗಬಾರದೆಂದು ಎಚ್ಚರಿಕೆಯನ್ನು ವಹಿಸಿದ್ದಾರೆ.

ಪರೀಕ್ಷಾ ಕೇಂದ್ರದ ಬಳಿಯೇ ಈ ಬಗ್ಗೆ‌ ಮಾತನ್ನಾಡಿದ್ದಾರೆ. ನಿನ್ನೆಗೆ ಪಿಯುಸಿ ಪರೀಕ್ಷೆ ನಡೆದಿದೆ. ಎಲ್ಲವೂ ಸುಸಜ್ಜಿತವಾಗಿ ನಡೆದಿದೆ. ಯಾವುದೇ ಥರದ ತೊಂದರೆಗಳು ಆಗದೆ ಇರುವ ರೀತಿ ಜವಾಬ್ದಾರಿಯನ್ನು ತೆಗೆದುಕೊಂಡು ಮಾಡಿದ್ದೇವೆ. ಅದು ಒಂದು ಭಾಗ. ಇನ್ನೊಂದು ಭಾಗ ಇವತ್ತಿನಿಂದ ಅಂದ್ರೆ ಮಾರ್ಚ್ 18ರಿಂದ ಏಪ್ರಿಲ್ 2ನೇ ತಾರೀಖಿನ ತನಕ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯ ಮಟ್ಟದಲ್ಲಿ ಎಲ್ಲಾ ಕಡೆಯಲ್ಲೂ ನಡೆಯುತ್ತದೆ.. ಸುಮಾರು 15 ಸಾವಿರಕ್ಕೂ ಹೆಚ್ಚು ಶಾಲೆಗಳು, 2,800 ಕೇಂದ್ರದಲ್ಲಿ ಇವತ್ತು ಪರೀಕ್ಷೆ ನಡೆಯುತ್ತಾ ಇದೆ.

ಸುಮಾರು 8,69,000 ಲಕ್ಷ ಮಕ್ಕಳು ಪರೀಕ್ಷೆಯನ್ನ ಬರೀತಾ ಇದ್ದಾರೆ. ರಿಪೀಟರ್ಸ್, ಪ್ರೈವೇಟ್ ಸ್ಟುಡೆಂಟ್ ಎಲ್ಲಾ ಸೇರಿದ್ರೆ 9,6,000 ಮಕ್ಕಳು ಎಕ್ಸಾಂ ತೆಗೆದುಕೊಳ್ತಾ ಇದ್ದಾರೆ. ನಾವೂ ಈ ವರ್ಷ ಮೊದಲಿನಿಂದಾನೇ ಏನೆಲ್ಲಾ ಕೆಲಸಗಳನ್ನು ಮಾಡುದ್ವಿ ಮಕ್ಕಳು ಅದನ್ನೇ ಹೇಳಿದ್ರು. ತಂದೆ ತಾಯಂದಿರಿಗೆ ಟೆನ್ಶನ್, ಮಕ್ಕಳಿಗೆ ಟೆನ್ಶನ್, ಇಲಾಖೆಯಿಂದ ನಮಗೆ ಟೆನ್ಶನ್. ಕ್ಷೆಷನ್ ಬ್ಯಾಂಕಿಂಗ್, ಪ್ರಿಪರೇಟರಿ ಎಲ್ಲವೂ ಮಕ್ಕಳಿಗೆ ಬಹಳ ಸಹಾಯವಾಗಿದೆ. ಬಹಳ ಖುಷಿಯಾಗಿಯೇ ನಾವೂ ಪರೀಕ್ಷೆ ಬರೆಯೋದಕ್ಕೆ ಹೋಗ್ತಾ ಇದ್ದೀವಿ ಅಂತ ಮಕ್ಕಳು ಹೇಳಿದ್ರು. ಇದು ನಮಗೆ ಬಹಳ ಖುಷಿ ಕೊಡ್ತು. ಇಡೀ ರಾಜ್ಯದಲ್ಲಿ ಎಲ್ಲಾ ಮಕ್ಕಳಿಗೂ ಈ ಮೂಲಕ ಶುಭಕೋರುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now