Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಪೊಲೀಸ್ ಇಲಾಖೆಗೆ ಎಂಎಲ್‌ಸಿ ಕೆ.ಎಸ್.ನವೀನ್ ಅವರಿಂದ ನೂತನ ಮಹೀಂದ್ರಾ ಜೀಪ್ ಹಸ್ತಾಂತರ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆ. 03 : ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.

ಚಿತ್ರದುರ್ಗ ನಗರದ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪೊಲೀಸ್ ವರಿಷ್ಟಾಧಿಕಾರಿಗೆ ಹದಿನಾಲ್ಕು ಲಕ್ಷ ರೂ.ಬೆಲೆಯ ಮಹೇಂದ್ರ ಹೊಸ ಮಾಡೆಲ್ ಜೀಪನ್ನು ಹಸ್ತಾಂತರಿಸಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಹಾಗೂ ತೊಂದರೆಯಲ್ಲಿರುವವರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಇದನ್ನು ನೀಡಲಾಗುತ್ತಿದೆ. ರಕ್ಷಣಾಧಿಕಾರಿ ರಂಜಿತ್ ಕುಮಾರ್ ಭಂಡಾರು ಕೋರಿಕೆಯ ಮೇರೆಗೆ ಜೀಪ್ ನೀಡಿದ್ದೇನೆ. ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ. ಕೆಲವು ಸಂದರ್ಭಗಳಲ್ಲಿ ಗಣ್ಯರಿಗೆ ಎಸ್ಕಾರ್ಟ್ ನೀಡುವುದಕ್ಕಾಗಿಯೆ ವಾಹನಗಳ ಬಳಕೆಯಾಗುತ್ತಿರುತ್ತದೆ. ಇವೆಲ್ಲವನ್ನು ಮನಗಂಡು ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇನೆಂದು ಹೇಳಿದರು.

ಬಿಜೆಪಿ.ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಎಸ್ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ಪ್ರಧಾನ ಕಾರ್ಯದರ್ಶಿ ಚೇತನ ಕುಮಾರ್, ಉಪಾಧ್ಯಕ್ಷ ಧನಂಜಯ್, ಯಶವಂತ್, ಕಿರಣ್  ಓಬಳೇಶ್ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now