Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾಗಲಕೋಟೆಯಲ್ಲಿ ಕೂತು ಸಿದ್ದರಾಮಯ್ಯರಿಗೆ ಸವಾಲು ಹಾಕಿದ ಶ್ರೀರಾಮುಲು

---Advertisement---

ಬಾಗಲಕೋಟೆ: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಎರಡು ಕ್ಷೇತ್ರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಘಟಾನುಘಟಿ ನಾಯಕರೆಲ್ಲಾ ಸೇರಿ ಪ್ರಚಾರ ಮಾಡ್ತಿದ್ದಾರೆ. ಇಂದು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿರುವ ಶ್ರೀರಾಮುಲು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರಿಗೆ ಸವಾಲನ್ನು ಹಾಕಿದ್ದಾರೆ.

ಎಸ್ಸಿ/ಎಸ್ಟಿ ಹಣವನ್ನು ದುರುಪಯೋಗ ಮಾಡಿಕೊಂಡಿರುವುದಕ್ಕೆ ಕಾಂಗ್ರೆಸ್ಸಿನವರು ಸ್ಪಷ್ಟೀಕರಣ ಕೊಡಬೇಕಾಗುತ್ತದೆ ಸಿಎಂ ಸಾಹೇಬ್ರೆ. ಇವತ್ತು ಬಾಗಲಕೋಟೆಯಲ್ಲಿ ಇದ್ದೀರಿ. ನೀವೂ ಸಂಜೆ 5 ಗಂಟೆ ಒಳಗೆ ಬಾಗಲಕೋಟರ ಬಿಡಬೇಕು, ನಾವೂ ಬಿಡಬೇಕು. ಅಷ್ಟರೊಳಗೆ ಕ್ಲಾರಿಫಿಕೇಷನ್ ಕೊಡಬೇಕು. ನೀವೇನಾದ್ರೂ ಆ ಹಣವನ್ನ ಕಾಂಗ್ರೆಸ್ ದುರಪಯೋಗ ಪಡಿಸಿಕೊಂಡಿಲ್ಲ, ಕೇವಲ ಬಿಜೆಪಿ ಮಾತ್ರ ದುರುಪಯೋಗ ಪಡಿಸಿಕೊಂಡಿದೆ ಅನ್ನೋದಾದ್ರೆ ಹೇಳಿ ರಾಜಕೀಯದಿಂದಾನೇ ನಿವೃತ್ತಿ ಆಗ್ತೇನೆ. ಸಿದ್ದರಾಮಯ್ಯ ಸಾಹೇಬ್ರೇ ಬಹಲಕ ಸ್ಪಷ್ಟವಾಗಿ ಹೇಳ್ತೇನೆ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ.

ದಲಿತರ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿ ಅದನ್ನ ದುರುಪಯೋಗ ಮಾಡಿಕೊಳ್ಳುವ ಕೆಲಸ ಮಾಡಿದ್ದೀರಿ ಕಾಂಗ್ರೆಸ್ ನವರು. ಇವತ್ತು ದಲಿತರ ಉದ್ಧಾರಕ್ಕೋಸ್ಕರ ನಿಗಮ ಮಂಡಳಿ ಸ್ಥಾಪನೆ ಆಯ್ತು. ನಿಗಮ ಮಂಡಳಿ ಸ್ಥಾಪನೆ ಆದ್ರೆ ಆ ಹಣದಿಂದ 2024ರ ಲೋಕಸಭಾ ಚುನಾವಣೆಯನ್ನು ತಾವೂ ಮಾಡ್ಲಿಲ್ವಾ. 187 ಕೋಟಿ ರೂಪಾಯಿ ಎಲ್ಲಿ ಹೋಯ್ತು. ಇವತ್ತು ನಿಗಮಗಳಿಂದ ಹಣವನ್ನು ತೆಗೆದು ಶೇಂದಿ ಅಂಗಡಿಗೆ, ಬಂಗಾರದ ಅಂಗಡಿಗೆ, ಸೆಕ್ಯುರಿಟಿ ಏಜೆನ್ಸಿಗಳಿಗೆ ಕಳುಹಿಸಿ, ಅದರ ಮೂಲಕ ಎಲ್ಲಾ ಲೋಕಸಭಾ ಚುನಾವಣೆಗೆ ಕಳುಹಿಸಿ ನಮ್ಮಂಥವರನ್ನೆಲ್ಲಾ ಸೋಲಿಸುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡಿದರು ಎಂದು ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...