Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀ ಪಾಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಕೃಷ್ಣ ಮತ್ತು ರುಕ್ಮಿಣಿ ವೇಷಧಾರಿ ಪುಟಾಣಿಗಳ ಕಲರವ

---Advertisement---

 

ವರದಿ ಮತ್ತು ಫೋಟೋ ಕೃಪೆ

ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಸೆ. 06) : ನಗರದ ಶ್ರೀ ಪಾಶ್ವನಾಥ ವಿದ್ಯಾ ಸಂಸ್ಥೆಯ 50 ನೇ ವರ್ಷದ ಅಂಗವಾಗಿ ಬುಧವಾರ ಶ್ರೀ ಕೃಷ್ಣಾಷ್ಠಮಿಯ ದಿನದಂದು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರುಕ್ಮಿಣಿಯ ವೇಷವನ್ನು ಹಾಕಲಾಗಿತ್ತು.

ಕೃಷ್ಣಾ ಮತ್ತು ರುಕ್ಮೀಣಿ ವೇಷವನ್ನು ಧರಿಸಿದ ಶಾಲಾ ಮಕ್ಕಳು ಶಾಲೆಯ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ಒಂದು ಸುತ್ತು ಮೆರವಣಿಗೆಯನ್ನು ನಡೆಸಿ ನೋಡುಗರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಶ್ರೀ ಪಾಶ್ವನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಬಾಬು ಲಾಲ್ ಜೀ, ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ, ಕಾರ್ಯದರ್ಶಿ ಸುರೇಶ್ ಕುಮಾರ್ ನಿರ್ದೇಶಕರುಗಳಾದ ಮಹಾವೀರ್, ಮುಕೇಶ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ, ಶಿಕ್ಷಕರು, ಭೋದಕೇತರ ವರ್ಗದವರು, ಪೋಷಕರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...