Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೋನು ಶ್ರೀನಿವಾಸ್ ಗೌಡ 4 ದಿನಗಳು ಪೊಲೀಸರ ವಶಕ್ಕೆ..!

---Advertisement---

ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಸದ್ಯ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಆರೋಪದ ಮೇಲೆ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಎಂಟು ವರ್ಷದ ಮಗುವನ್ನು ದತ್ತು ಪಡೆದಿದ್ದು, ಮಗುವನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಸುತ್ತೇನೆ ಎಂದು ತಂದೆ-ತಾಯಂದಿರಿಂದ ಕರೆದುಕೊಂಡು ಬಂದಿದ್ದರು. ಇದೀಗ ಆ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಶಕ್ಕೆ ಸೇರಿದ್ದಾರೆ. ಮಗುವನ್ನು ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿದೆ.

 

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿವಾದಗಳನ್ನು ಮಾಡಿಕೊಳ್ಳುತ್ತಿದ್ದ ಕಾರಣಕ್ಕೇನೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಶೋಗೆ ಎಂಟ್ರಿ ಪಡೆದಿದ್ದರು. ಅಲ್ಲಿದ್ದಾಗಲೂ ಸಾಕಷ್ಟು ವಿವಾದ ಸೃಷ್ಟಿ ಮಾಡಿಕೊಂಡಿದ್ದರು. ಇತ್ತಿಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಬಿಕಿನಿ ತೋರಿಸಿ ಹಲ್ ಚಲ್ ಸೃಷ್ಟಿ‌ ಮಾಡಿದ್ದರು. ಅದರ ಜೊತೆಗೆ ಮಗುವೊಂದರ ಜೊತೆಗೆ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಿದ್ದರು. ಸೇವಂತಿಗೆ ಅದು ಕೊಡಿಸಿದೆ, ಇದು ಕೊಡಿಸಿದೆ ಅಂತ ಸೇವಂತಿ ಇಲ್ಲದೆ ಸೀನು ರೀಲ್ಸ್ ಕಂಪ್ಲೀಟ್ ಆಗುತ್ತಿರಲಿಲ್ಲ‌. ಆದರೆ ಈ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಇಂದು ಅರೆಸ್ಟ್ ಆಗಿದ್ದ ಸೋನುಳನ್ನು ನೃಪತುಂಗ ರಸ್ತೆಯ ಬೆಂಗಳೂರು ಗ್ರಾಮಾಂತರ CJM ಕೋರ್ಟ್ ಗೆ ಬ್ಯಾಡರಹಳ್ಳಿ ಪೊಲೀಸರು ಹಾಜರು ಪಡಿಸಿದ್ದರು. ಹೆಚ್ಚಿನ ತನಿಖೆ ಹಾಗೂ ಮಹಜರ್ ನಡೆಸಬೇಕಾದ ಹಿನ್ನೆಲೆ ಸೋನುಗೌಡ ಪೊಲೀಸ್ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಮಹಿಳಾ ಸಾಂತ್ವಾನ ನಿಲಯದಲ್ಲಿ ಆಶ್ರಯ ಪಡೆಯುತ್ತಾರೆ. ಇನ್ನು ಮಗುವನ್ನು ರಾಯಚೂರಿನಿಂದ ಕರೆತಂದಿದ್ದು, ಪೊಲೀಸರು ರಾಯಚೂರಿಗೆ ಹೋಗಿ ವಿಚಾರಣೆ ನಡೆಸಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment