ಬೆಂಗಳೂರು; ಸೋನು ನಿಗಮ್ ಹೇಳಿಕೆಯಿಂದಾಗಿ ಇಂದು ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕನ್ನಡಪರ ಸಂಘಟನೆಯವರು ಕೂಡ ಸೋನು ನಿಗಮ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ನೆಲದಲ್ಲಿಯೇ ನಿಂತು ಕನ್ನಡಿಗರ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ತಕ್ಕ ಶಿಕ್ಷೆಯಾಗಲೇಬೇಕು ಎಂದಿದ್ದಾರೆ. ಅದಕ್ಕಾಗಿ ಬೃಹತ್ ಪ್ರತಿಭಟನೆ ಕೂಡ ಮಾಡಿದ್ದಾರೆ. ಇದೀಗ ಚಿತ್ರರಂಗದವರು ಕೂಡ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಇಂದು ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿದ್ದಾವೆ. ಮ್ಯೂಸಿಕ್ ಡೈರೆಕ್ಟರ್, ನಿರ್ಮಾಪಕರೆಲ್ಲಾ ಸೇರಿ ಸೋನು ನಿಗಮ್ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಚರ್ಚೆಯಲ್ಲಿ ಸೋನು ನಿಗಮ್ ಅವರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆಯೂ ಬಹಳಷ್ಟು ಚರ್ಚೆ ನಡೆದಿದೆ. ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಸೋನು ನಿಗಮ್ ವಿರುದ್ಧ ಅಸಹಾಕಾರ ತೋರಿಸುತ್ತೇವೆ ಎಂದಿದ್ದಾರೆ.
ಜೊತೆಗೆ ಅವರು ಕನ್ನಡಿಗರನ್ನ ಕ್ಷಮೆ ಕೇಳಲೇಬೇಕು ಅಂತಾನೂ ಒತ್ತಾಯ ಹೇರಿದ್ದಾರೆ. ಇನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಸೋನು ನಿಗಮ್ ಅವರನ್ನ ಕನ್ನಡದಲ್ಲಿ ಎಂಟರ್ಟೈನ್ ಮಾಡೋದು ಬೇಡ ಎಂದಿದ್ದಾರೆ. ನನ್ನ ಸಿನಿಮಾದಲ್ಲಿ ಇನ್ಮುಂದೆ ಆಡಿಸಲ್ಲ ಎಂದಿದ್ದಾರೆ. ಮಾರ್ಟಿನ್ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಕೂಡ ನಮಗೆ ಅವರಿಂದ ಆಡಿಸುವ ಅಗತ್ಯ ಇಲ್ಲ ಎಂದಿದ್ದಾರೆ. ಹೀಗೆ ಹಲವರು ಸೋನು ನಿಗಮ್ ಮಾತಿಗೆ ಆಕ್ರೋಶ ಹೊರ ಹಾಕಿದ್ದಾರೆ.
