ತುಮಕೂರು: ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಸೆಪ್ಟೆಂಬರ್ ಕ್ರಾಂತಿ ಎಂಬುದನ್ನ ಹೇಳಿದ್ದರು. ರಾಜ್ಯ ರಾಜಕೀಯದಲ್ಲಿ ಈ ಸೆಪ್ಟೆಂಬರ್ ಕ್ರಾಂತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಲ್ಲರಲ್ಲೂ ಕುತೂಹಲವನ್ನು ಹುಟ್ಟು ಹಾಕಿತ್ತು. ಇದೀಗ ಆ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಮಾತನ್ನಾಡಿದ್ದಾರೆ. ಅದರಲ್ಲೂ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟನೆ ಮಾಡಿದ ಬಳಿಕ ರಾಜಣ್ಣ ಬಿಜೆಪಿ ಸೇರ್ತಾರೆ ಎಂಬ ಮಾತನ್ನ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ.
ಇದೀಗ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು, ಸೆಪ್ಟೆಂಬರ್ ಕ್ರಾಂತಿ ಬಾಲಕೃಷ್ಣ ಅವರಿಂದಲೇ ಶುರುವಾಗುತ್ತೆ. ಅವರ ತಂಡವೇ ಬಿಜೆಪಿಗೆ ಹೋಗಬಹುದು. ಸಿಎಂ ಮಾಡ್ತೀವಿ ಅಂದ್ರೆ ಬಿಜೆಪಿಗೆ ಹೋಗಬಹುದು. ಕೆ.ಎನ್.ರಾಜಣ್ಣ ಹೇಳಿದ ಸೆಪ್ಟೆಂಬರ್ ಕ್ರಾಂತಿ ಇದೆ. ಬಾಲಕೃಷ್ಣ ಅವರು ಈ ರೀತಿ ಹೇಳುತ್ತಾ ಇರೋದು ಯಾರನ್ನೋ ಮೆಚ್ಚಿಸುವುದಕ್ಕೋ ಅಥವಾ ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕೋ ಇರಬಹುದು. ರಾಜಣ್ಣ ಅವರ ಮೇಲೆ ಯಾರೂ ಆರೋಪ ಮಾಡ್ತಾ ಇದ್ದಾರೆ. ನಾಳೆ ಬೆಳಗ್ಗೆ ಅವರೆಲ್ಲ ಬಿಜೆಪಿಗೆ ಹೋದರೂ ಆಶ್ಚರ್ಯವಿಲ್ಲ.
ಇದನ್ನೆಲ್ಲಾ ಬಿಜೆಪಿಯ ಶಾಸಕ ಯತ್ನಾಳ್ ಮಾತನ್ನಾಡಿದ್ದಾರೆ. 60-65 ಜನಾನ ನಾನು ಕರ್ಕೊಂಡು ಬರ್ತೀನಿ. ಆ ರೀತಿಯಾದ ಬೆಳವಣಿಗೆ ನಡೆದರೆ ಅದೇ ಸೆಪ್ಟೆಂಬರ್ ಕ್ರಾಂತಿ ಇರಬಹುದು. ಸೆಪ್ಟೆಂಬರ್ ನಲ್ಲಿ ಅವರಿಗೆಲ್ಲ ಬ್ರೈನ್ ಮ್ಯಾಪಿಂಗ್ ಮಾಡಿಸಿ, ಯಾರು ಯಾರ ಜೊತೆಗೆ ಮಾತುಕತೆ ಮಾಡಿದ್ದಾರೆ, ಚರ್ಚೆ ನಡೆಸಿದ್ದಾರೆ, ಯಾರ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಬ್ರೈನ್ ಮ್ಯಾಪಿಂಗ್ ಆಗಲಿ. ಸೆಪ್ಟೆಂಬರ್ ಕ್ರಾಂತಿಯದ್ದು ಎಲ್ಲಾ ಹೊರ ಬರಲಿ ಎಂದಿದ್ದಾರೆ.






