ರಾಮನಗರ: ಕನಕಪುರದಲ್ಲಿ ಬಿಜೆಪಿ ಖಾತೆ ತೆರೆಯಲು ಸವಾಲಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ್, ಸವಾಲಿದೆ ಇಲ್ಲ ಎನ್ನಲ್ಲ. ಆದರೆ ಆ ರೀತಿಯ ದೌರ್ಜನ್ಯ, ಅನ್ಯಾಯ, ಉಸಿರುಗಟ್ಟುವಂತ ವಾತಾವರ, ದಬ್ಬಾಳಿಕೆ ನಡೆದಿರುವುದು ನಿಮಗೆಲ್ಲಾ ಗೊತ್ತಿದೆ. ಹೀಗಾಗಿ ಇದಕ್ಕೆಲ್ಲಾ ಕೊನೆಗಾಲ ಬಂದಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಮಾತನಾಡಿ, ಅವರು ಜನಪ್ರತಿನಿಧಿಗಳೇ. ಶಾಸಕರಿದ್ದಾರೆ. ಶಾಸಕರಿರುವಾಗ ಒಂದಷ್ಟು ಒತ್ತಾತಗಳು ಬೇಡಿಕೆಗಳು ಇರುತ್ತವೆ. ಸರ್ಕಾರ ಅವರಿಗೂ ಅವಕಾಶ ಕೊಟ್ಟಿದೆ. ನಮ್ಮ ಪಕ್ಷದ ನಾಯಕರ ಮಾತಿಗೂ ಹೆಚ್ಚು ಒತ್ತನ್ನು ನೀಡುತ್ತೀವಿ. ಎಲ್ಲರ ಜೊತೆಗೂ ಕೂಡಿ ಬಾಳಬೇಕಿದೆ. ಯಾರೇ ಇದ್ದರೂ ಕೆಲಸ ಮಾಡಿಸುತ್ತೇವೆ. ಕೆಲಸಕ್ಕೆಲ್ಲ ಏನು ಸಮಸ್ಯೆ ಇಲ್ಲ. ನಮ್ನ ಸರ್ಕಾರದಲ್ಲಿ ನಾವೂ ಹೇಳಿದ್ಧ ಆಗುವುದು, ನಾವೂ ಹೇಳಿದ್ದೇ ಮಾಡುವುದು. ಹೊಂದಾಣಿಕೆ ಎಂಬುದೆಲ್ಲ ಏನಿಲ್ಲ. ರಾಜಕೀಯವಾಗಿ ಬಹಳ ಸ್ಪಷ್ಟವಾಗಿದ್ದೀವಿ. ಪಕ್ಷದಲ್ಲಂತು ಯಾರ ಜೊತೆಗೂ ನೋ ಕಾಂಪ್ರೂಮೈಸ್ ಅಂತ ಕುಮಾರಸ್ವಾಮಿಯವರದ್ದೇ ನಡೀತಿದೆ ಎಂಬ ಮಾತಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.
ಇದೇ ವೇಳೆ ಡಿಕೆಶಿ ಬಗ್ಗೆ ಮಾತನಾಡಿ, ಯಾರ ಬಾಯಲ್ಲಿ ಯಾವ ಮಾತು. ಪಾರದರ್ಶಕತೆ, ಆಡಳಿತ, ಭ್ರಷ್ಟಾಚಾರ ಈ ಪದಗಳು ಬರ್ತಿದೆಯಲ್ಲ ಅದೆ ಸಂತೋಷ ನನಗೆ. ಭ್ರಷ್ಟಾಚಾರ ರಹಿತವಾದ ಸಮಾಜ ಕಟ್ಟಬೇಕು ಅಂತ ಹೇಳಿದ್ದಾರೆ. ಕಣಕಣದಲ್ಲೂ ಭ್ರಷ್ಟಚಾರ ತುಂಬಿ ಹೋಗಿದೆ. ಅಧಿಕಾರ ದುರ್ಬಳಕೆ ಅವರು ಹೇಳುವುದನ್ನೆಲ್ಲ ಸಹಜವಾಗಿ ಜೀವನದಲ್ಲಿ ಅಳವಡಿಸಿಕೊಂಡು ಬಿಟ್ಟಿದ್ದಾರೆ. ಅವರು ಈ ಪದ ಬಳಕೆ ಮಾಡುತ್ತಿರುವುದೇ ಸಂತಸ ಎಂದಿದ್ದಾರೆ.