ಮಂಡ್ಯ.ಜುಲೈ.13 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರಸಿದ್ಧ ಗೋಸಾಯಿ ಘಾಟ್ ನಲ್ಲಿ ಗಾಯಕಿ ಎಸ್. ಜಾನಕಿ ಅವರ ಅಸ್ಥಿ ವಿಸರ್ಜನೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ.
ಗೋಸಾಯಿ ಘಾಟ್ ಬಳಿ ಕಾವೇರಿ ನದಿಯಲ್ಲಿ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ಅಸ್ಥಿ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಎಸ್. ಜಾನಕಿ ಅವರ ಕುಟುಂಬ ಸದಸ್ಯರು ಹಾಗೂ ಅತ್ಯಾಪ್ತರು ಮಾತ್ರ ಉಪಸ್ಥಿತರಿದ್ದು, ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಲೋಕದಲ್ಲಿ ಅಜರಾಮರರಾಗಿರುವ ಗಾನ ಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಹಂಪಾಪುರ ಸಮೀಪದ ಕಣಿಯನಹುಂಡಿ ಗ್ರಾಮದಲ್ಲಿ ನಿನ್ನೆ ನೆರವೇರಿಸಲಾಯಿತು.











