ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ. 17 : ಶಿವಶಿಂಪಿ ಸಮಾಜದ ಕುಲಗುರು ಶ್ರೀ ಶಿವದಾಸಿಮಯ್ಯರವರ ಜಯಂತಿ, ಚಿತ್ರದುರ್ಗ ಜಿಲ್ಲಾ ಘಟಕದ ರಜತ ಮಹೋತ್ಸವ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 9 ರಂದು ಅದ್ದೂರಿಯಾಗಿ ನಡೆಸಲು ತೀರ್ಮಾನ ಮಾಡಲಾಯಿತು.


ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ (ರಿ.)ವತಿಯಿಂದ ನಗರದ ದೊಡ್ಡಪೇಟೆಯಲ್ಲಿನ ಶ್ರೀ ಸಂಪಿಗೆ ಸಿದ್ದೇಶ್ವರ ವಿದ್ಯಾಸಂಸ್ಥೆ(ರಿ.)ಯಲ್ಲಿ ಸಮಾಜದ ಅಧ್ಯಕ್ಷರಾದ ಪಿ.ಎಸ್. ಶಂಭುಲಿಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ 2024-25 ಮತ್ತು 2025-26ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ 2024-25, 2025-26, ಜಮಾ ಖರ್ಚು ಪರೀಶೀಲನೆ, 2026-27 ಸಾಲಿನ ಮುಂಗಡ ಜಮಾ-ಖರ್ಚು ಮಂಡನೆ. 2019-20,2020-21,2021-22,2022-23,2023-24&2024-25,2025-26ನೇಸಾಲಿನ ನೊಂದಣಿ ನವೀಕರಣದ ಬಗ್ಗೆ ಚರ್ಚೆ ನಡೆಸಲಾಯಿತು.
2001ರಲ್ಲಿ ಜಿಲ್ಲಾ ಘಟಕ ಸ್ಥಾಪಿತಗೊಂಡು 25 ವರ್ಷಗಳ ಪೂರೈಸಿರುವುದರಿಂದ ರಜತ ಮಹೋತ್ಸವ ಆಚರಣೆಯ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಮಾಡಲು ನಿರ್ಧಾರ ಮಾಡಲಾಗಿದ್ದು, ಇದರಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಬಾರಿ ಎರಡು ವರ್ಷ ಮಕ್ಕಳಿಗೆ ಮಾಡಲು ತೀರ್ಮಾನ ಮಾಡಿದ್ದು, ಮಕ್ಕಳಿಗೆ ಶೇ.85 ಅಂಕಗಳನ್ನು ನಿಗಧಿ ಮಾಡಲಾಯಿತು. ಇದ್ದಲ್ಲದೆ ನಮ್ಮ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲು ನಿರ್ಧಾರ ಮಾಡಲಾಯಿತು.
ಶಿವಶಿಂಪಿ ಸಮಾಜ ಚಿತ್ರದುರ್ಗ ಘಟಕ 25 ವರ್ಷ ಪೂರ್ಣ ಮಾಡಿದ ಹಿನ್ನಲೆಯಲ್ಲಿ ಇದರ ಸವಿ ನೆನಪಿಗಾಗಿ ಒಂದು ಜಾಗವನ್ನು ಖರೀದಿ ಮಾಡಿ ಅಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿ ಇದಕ್ಕೆ ಬೇಕಾದ ಅಗತ್ಯ ಹಣಕಾಸಿನ ನೆರವನ್ನು ಸಮುದಾಯದವರಿಂದ ವಂತಿಕೆ ರೂಪದಲ್ಲಿ ಸಂಗ್ರಹ ಮಾಡಲು ತೀರ್ಮಾನ ಮಾಡಲಾಯಿತು. ಇದರ ಬಗ್ಗೆ ಈಗಾಗಲೇ ಹಲವಾರು ನಿವೇಶನಗಳನ್ನು ಪರಿಶೀಲನೆ ಮಾಡಲಾಗಿದ್ದು ಅಂತಿಮವಾಗಿ ಸಂಘ ನಿರ್ಧಾರವನ್ನು ಮಾಡಬೇಕಿದೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶರಣರ ಬಗ್ಗೆ ಉಪನ್ಯಾಸ, ವಚನಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವಂತ ಕಾರ್ಯವನ್ನು ಮಾಡಲು ತೀರ್ಮಾನ ಮಾಡಲಾಯಿತು.
ಚಿತ್ರದುರ್ಗದಲ್ಲಿ ನಮ್ಮ ಸಮುದಾಯ ಕುಟುಂಬದ ಸದಸ್ಯರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನೀಡುವುದರ ಮೂಲಕ ಎಷ್ಟು ಸಂಖ್ಯೆಯಲ್ಲಿ ನಾವು ಇದ್ದೇವೆ ಎಂದು ತಿಳಿಯಲಾಗುತ್ತದೆ ಈ ಹಿನ್ನಲೆಯಲ್ಲಿ ಎಲ್ಲರು ಸಹಾ ತಮ್ಮ ಕುಟುಂಬದ ವಿವರವನ್ನು ನೀಡುವಂತೆ ಮನವಿ ಮಾಡಿದ್ದು, ರಜತ ಮಹೋತ್ಸವದ ಯಶಸ್ವಿಗಾಗಿ ವಿವಿಧ ರೀತಿಯ ಸಮಿತಿಗಳನ್ನು ರಚನೆ ಮಾಡಲಾಗುವುದು ಇಷ್ಟ ಇದ್ದವರು ತಮಗೆ ಅನುಕೂಲವಾದ ಸಮಿತಿಗೆ ಸೇರುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಗೌರವಾಧ್ಯಕ್ಷರಾದ ಶಿವಹಾಲಪ್ಪ, ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜನ್, ಉಪಾಧ್ಯಕ್ಷರಾದ ಡಿ.ವಿ.ಮುರುಗೇಶ್, ಖಂಜಾಚಿ ಪಿ.ಬಿ.ನಿರ್ಮಲ, ನಿರ್ದೆಶಕರುಗಳಾದ ಎಸ್.ವಿ.ಕೋಟ್ರೇಶ್, ಕರಿಬಸವಸ್ವಾಮಿ, ರಮೇಶ್, ಪ್ರಭಘು ಪ್ರಸಾದ್, ಬಸವರಾಜಪ್ಪ ಶ್ರೀಮತಿ ನೀಲಮ್ಮ ಕಾಳಘಟ್ಟ, ಷಣ್ಮುಖಪ್ಪ, ಜಯದೇವಮೂರ್ತಿ, ಶಂಬಣ್ಣ, ಮಹಿಳಾ ಘಟಕದ ಅಧ್ಯಕ್ಷರಾದ ಇಂದಿರಾ ಜಯದೇವಮೂರ್ತಿ, ನಂದಾ ಬಕ್ಕೇಶ್, ಶೈಲಜ ವಿಜಯಕುಮಾರ್, ಗೌರಮ್ಮ ಬಸವರಾಜ್ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.














