Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದೇಶ್ವರಸ್ವಾಮಿಗಳು ಸಮಾಜಕ್ಕೆ ಮಾದರಿಯಾಗಿದ್ದರು : ಎಂ.ಕೆ.ತಾಜ್‍ಪೀರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.03): ಭಕ್ತ ಸಮೂಹವನ್ನು ಬಿಟ್ಟು ಅಗಲಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರಸ್ವಾಮಿಗಳಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ನುಡಿನಮನ ಸಲ್ಲಿಸಲಾಯಿತು.

ಸಿದ್ದೇಶ್ವರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಭಕ್ತರಾಮೇಗೌಡ ಜೇಬಿಲ್ಲದ ಸಂತ ಎಂದೆ ಹೆಸರುವಾಸಿಯಾಗಿದ್ದ ಸಿದ್ದೇಶ್ವರಸ್ವಾಮಿಗಳು ಸರಳತೆಗೆ ಹೆಸರುವಾಸಿಯಾಗಿದ್ದರು. ನಿಧಿ ಸಂಪತ್ತನ್ನು ಗಳಿಸಬೇಕೆಂಬ ಆಸೆ ಎಳ್ಳಷ್ಟು ಇರಲಿಲ್ಲ. ನುಡಿದಂತೆ ನಡೆದು, ನಡೆದಂತೆ ನುಡಿಯುತ್ತಿದ್ದರು. ಧಾರ್ಮಿಕ, ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಆಸಕ್ತಿಯುವಳ್ಳವರಾಗಿದ್ದರು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಗಾಂಧಿ ತತ್ವ ಅಳವಡಿಸಿಕೊಂಡು ಖಾವಿ ಧರಿಸದೆ ಖಾಲಿ ಜೇಬಿನಲ್ಲಿ ಬದುಕಿದ ಸಿದ್ದೇಶ್ವರಸ್ವಾಮಿಗಳು ಸಮಾಜಕ್ಕೆ ಮಾದರಿಯಾಗಿದ್ದರು. ಎಲ್ಲಾ ಜಾತಿ ಧರ್ಮದವರಿಗೂ ಬೇಕಾಗಿದ್ದ ಸ್ವಾಮಿಯ ನಿಧನ ನಾಡಿನ ಭಕ್ತ ಸಮೂಹಕ್ಕೆ ಅಪಾರವಾದ ನೋವುಂಟು ಮಾಡಿದೆ. ಸರಳತೆ ಅವರ ಮಂತ್ರವಾಗಿತ್ತು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಪದವೀಧರ ಕ್ಷೇತ್ರ ವಿಭಾಗದ ಅಧ್ಯಕ್ಷ ಮುದಸಿರ್‍ನವಾಜ್, ಚಾಂದ್‍ಪೀರ್, ರವಿ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ವಸೀಂ, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗಬಸಪ್ಪ ಇನ್ನು ಅನೇಕರು ಶ್ರದ್ದಾಂಜಲಿಯಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!