Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯರಿಗೆ ಸುತ್ತಿಕೊಂಡ ಮೂಡಾ ಕೇಸ್ : ಸಹೋದರ ಹೇಳಿದ್ದೇನು..?

---Advertisement---

ಮೈಸೂರು: ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ವಿಪಕ್ಷ ನಾಯಕರು ಹೋರಾಟವನ್ನೇ ಮಾಡುತ್ತಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಗಳನ್ನು ವಾಪಾಸ್ ನೀಡುತ್ತೇನೆಂದು ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಸಹೋದರ ಸಿದ್ದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಆ ಕೆಲಸ ಮಾಡುವುದಕ್ಕೆ ಹೋಗಿಯೇ ಇಲ್ಲ. ಇದು ನಮ್ಮ ಅತ್ತಿಗೆಗೆ ಗೊತ್ತು, ಅವನಿಗೆ ಗೊತ್ತಿಲ್ಲ. ದಿನ ದಿನ ಮೂಡಾ ಸೈಟ್ ಅಂತ ಹೇಳ್ತಾ ಇದಾರೆ. ಬೆಳಗ್ಗೆ ತಾನೇ ವಾಪಸ್ ಕೊಟ್ರು ಅನ್ನೋದು ಗೊತ್ತಾಯ್ತು. ಇದ್ರಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತಾರೆ. ಅದೆಂಗೆ ಹಿಂದಕ್ಕೆ ಕೊಟ್ರು ಅಲ್ವಾ. ಯಾಕ್ ರಾಜೀನಾಮೆ ಕೊಡಬೇಕು. ಇವರ ಮೇಲೆ ಹೊರಿಸಬೇಕಲ್ಲ ಅಂತ ಹೊರಿಸಿದ್ದಾರೆ. 40 ವರ್ಷದಿಂದ ಒಂದು ಕಪ್ಪು ಚುಕ್ಕೆ ಬಿದ್ದಿಲ್ಲ. ಹೆಂಗಾದ್ರೂ ಮಾಡಿ ಕೆಡವಬೇಕು ಅಂತ ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಈ ಥರ ಮಾಡಿದ್ದಾರೆ.

ನಮ್ಮ ತಂದೆಯೇ ಸಾಕಷ್ಟು ಆಸ್ತಿ ಮಾಡಿದ್ದಾರೆ. ಮೂಡಾ ಸೈಟಿನ ವಿಚಾರ ನಮ್ಗೆ ಅಷ್ಟೊಂದು ಗೊತ್ತಿಲ್ಲ. ನಮ್ಮ ಅತ್ತಿಗೆಗೆ ಗೊತ್ತಿತ್ತೇನೋ ಆದರೆ ಅವರಿಗೆ ಗೊತ್ತಿಲ್ಲ. ಅಪ್ಪನ ಆಸ್ತಿ ಬಿಟ್ಟು ಬೇರೆ ಯಾವ ಆಸ್ತಿಯನ್ನು ಮಾಡಿಲ್ಲ ಎಂದು ಸಿದ್ದಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಪಾರ್ವತಿ ಅವರಿಗೆ ಅರಿಶಿನ ಕುಂಕುಮಕ್ಕೆ ಬಂದಿದ್ದು ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲ. ಇದಕ್ಕೂ ನನಗೂ ಸಂಬಂಧವಿರಲಿಲ್ಲ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಸಲ ಹೇಳಿದ್ದಾರೆ. ಈಗ ಅವರ ಸಹೋದರ ಕೂಡ ಅದನ್ನೇ ಹೇಳುತ್ತಿದ್ದಾರೆ. ರಾಜಕಾರಣದಲ್ಲಿ ಇಷ್ಟೆಲ್ಲ ಬೆಳವಣಿಗೆಯಾದ ಬೆನ್ನಲ್ಲೇ ಪಾರ್ವತಿ ಅವರು ಮೂಡಾ ಸೈಟುಗಳನ್ನು ವಾಪಾಸ್ ಮಾಡುತ್ತಿನೆಂದು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...