ಚಿತ್ರದುರ್ಗ. ಏ.14: ಸಂವಿಧಾನ ರಚನೆಯ ಮೂಲಕ ದೇಶದ ದಲಿತರು, ಶೋಷಿತರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದೊರಕಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್, ದಲಿತರ ಬಾಳಿನ ಸೂರ್ಯ ಎನಿಸಿದ್ದಾರೆ ಎಂದು ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಿ.ವೈ.ಯುವರಾಜ್ ಹೇಳಿದರು.
ಮಂಗಳವಾರ ನಗರದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ರಾಮಜಿ ಸಕ್ಪಾಲ್ ಹಾಗೂ ರಮಾಬಾಯಿ ಅವರ ಹದಿನಾಲ್ಕನೇ ಮಗನಗಾಗಿ ಜನಿಸಿದ ಅಂಬೇಡ್ಕರ್, ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಅಪಾರ ಒಲವು ಹೊಂದಿದ್ದರು. ಸಮಾಜದಲ್ಲಿದ್ದ ಅಸಮಾನತೆಯನ್ನು ಪ್ರಶ್ನಿಸಿದ ಅವರು, ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಅಸ್ಮಿತೆ ಕಂಡುಕೊಳ್ಳುವAತೆ ಶೋಷಿತರಿಗೆ ಕರೆ ನೀಡಿದರು. ಅತ್ಯಂತ ಪ್ರಜ್ಞಾವಂತಿಕೆಯಿAದ ಎಲ್ಲಾ ವರ್ಗದ ಜನರ ಕಲ್ಯಾಣವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಶ್ವದಲ್ಲೇ ಅತ್ಯುತ್ತಮ ಎನಿಸಿದ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದರು. ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವಂತವಾಗಿಸಿರುವುದು ನಮ್ಮೆಲ್ಲ ಜವಾಬ್ದಾರಿಯಾಗಿದೆ. ಬಡವರಿಗೆ ನಿರ್ಲಕ್ಷಿತ ಸಮುದಾಯದವರಿಗೆ ಸಹಾಯ ಮಾಡವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದರು.
ಜಿಲ್ಲಾ ಶಸ್ತçಕಿತ್ಸಕ ಡಾ.ಎಸ್.ಪಿ. ರವೀಂದ್ರ ಮಾತನಾಡಿ, ಅತ್ಯಂತ ಸಂಕೀರ್ಣವಾದ ವರ್ಣ ಹಾಗೂ ಜಾತಿ ವ್ಯವಸ್ಥೆಯಿಂದ ಕೂಡಿದ ಸಮಾಜದಲ್ಲಿ, ದಲಿತ ಹಾಗೂ ಅಸ್ಪೃಶ್ಯರಾಗಿ ಜನಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು. ಎಲ್ಲಾ ಸಂಕಷ್ಟಗಳ ನಡುವೆಯೇ ಉನ್ನತ ಶಿಕ್ಷಣಗಳಿಸಿ, ದೇಶದ ಸಂವಿಧಾನ ರಚನೆ ಶಿಲ್ಪಿ ಎನಿಸಿದ ಅಂಬೇಡ್ಕರ್ ನಿಜವಾದ ಹೋರಾಟಗಾರಾಗಿದ್ದಾರೆ. ಅವರ ಜೀವನಯಶೋಗಾಥೆ ನಮ್ಮಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನ ಆಡಳಿತಕ್ಕೊಳಪಟ್ಟಿದ್ದು, ವೈದ್ಯರು ಹಾಗೂ ಸಿಬ್ಬಂದಿ ಶಿಸ್ತು ಬದ್ಧವಾಗಿ ಕೆಲಸ ಮಾಡುವ ಮೂಲಕ ಸಮಾಜ ಮುಖಿಯಾಗಿ ಆರೋಗ್ಯ ಸೇವೆಯನ್ನು ಜನರಿಗೆ ಒದಗಿಸಬೇಕು ಎಂದು ಡಾ.ಎಸ್.ಪಿ. ರವೀಂದ್ರ ಈ ಸಂದರ್ಭದಲ್ಲಿ ಹೇಳಿದರು.
ಜಯಂತಿ ಆಚರಣೆಯಲ್ಲಿ ನಿವಾಸಿ ವೈದ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ. ಆನಂದ್ ಪ್ರಕಾಶ್, ರೀಸರ್ಚ್ ರಿಜಿಸ್ಟಾರ್ ಡಾ.ಆರ್.ಪಿ.ವೇಣು, ವೈದ್ಯಾಧಿಕಾರಿ ಡಾ.ಜಿ.ಹೆಚ್.ಮೇಘ, ಆರ್ಥಿಕ ಸಲಹೆ ಡಾ.ಸಾಲಿ ಮಂಜಪ್ಪ, ಪ್ರಾಧ್ಯಾಪಕ ವಿಶ್ವಾಸ್ ಸೇರಿದಂತೆ ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಿ.ಎಂ.ಸಿ.ಆರ್.ನ ನರ್ಸಿಂಗ್ ಮೇಲ್ವಿಚಾರಕರು, ನರ್ಸಿಂಗ್ ಅಧಿಕಾರಿಗಳು ಬೋಧಕ ಬೋಧಕೇತರ ಸಿಬ್ಬಂದಿ, ಆಡಳಿತ ಕಛೇರಿಯ ಸಿಬ್ಬಂದಿ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವಿವಿಧ ವಿಭಾಗಗಳ ತಂತ್ರಜ್ಞರು, ಕಚೇರಿಯ ಸಿಬ್ಬಂದಿ, ಹೊರಸಂಪನ್ಮೂಲ ಸಿಬ್ಬಂದಿ ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










