ಬಾಗಲಕೋಟೆಯಲ್ಲಿ ಮಹಿಳೆ ಹಣ ಎಸೆದ ವಿಚಾರಕ್ಕೆ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಹೀಗಿದೆ..!

suddionenews
1 Min Read

 

ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ ಅನುದಾನ ತಾರತಮ್ಯ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಗರೋತ್ಥಾನ ಒಂದೇ ಅಲ್ಲ.‌ಬೇರೆ ಎಲ್ಲದರಲ್ಲೂ ತಾರತಮ್ಯ ಮಾಡಿದ್ದಾರೆ.‌ವಿರೋಧ ಪಕ್ಷದವರಿಗೆ 25 ಕೋಟಿ ಕೊಟ್ರೆ. ಬಿಜೆಪಿಯವರಿಗೆ 100 ಕೋಟಿ ಕೊಟ್ಟಿದ್ದಾರೆ. ಒಂದು ಕಡೆ ಸಮಗ್ರ ಅಭಿವೃದ್ಧಿ ಆಗಬೇಕು ಅಂತಾರೆ.‌ಮತ್ತೊಂದು ಕಡೆ ಅನುದಾನ ತಾರತಮ್ಯ ಕಾಣ್ತಾ ಇದೆ.

ಅದರಲ್ಲೂ ಕೂಡ ೪೦% ಕಮಿಷನ್ ಹೋಗಬೇಕಲ್ವಾ..?. ಅವರ ಶಾಸಕರಿಗೆ ದುಡ್ಡು ಸಿಗಲಿ ಅಂತ ಅನುದಾನ ಬಿಡುಗಡೆ ಮಾಡಿದ್ದಾರೆ.‌ಸಮಗ್ರ ಅಭಿವೃದ್ಧಿ ಆಗಲ್ಲ, ತಾರತಮ್ಯನೂ ಹೋಗಲ್ಲ ಎಂದು ಅನುದಾನ ತಾರತಮ್ಯಕ್ಕೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಮಹಿಳೆ ಹಣ ಎಸೆದ ವಿಚಾರ, ಅವ್ರು ಮೊದಲು ಆರಂಭದಲ್ಲಿ ದುಡ್ಡು ತೆಗೆದುಕೊಂಡಿದ್ರು. ಒಬ್ಬರು ಮಾತ್ರ ದುಡ್ಡು ಬೇಡಾ ನ್ಯಾಯ ಕೊಡಿಸಿ ಅಂದಿದ್ರು. ಕೊಟ್ಟು ಬಂದಿದೆ, ಅವ್ರು ವಾಪಸ್ ಕೋಡೋಕೆ ಬಂದಿದ್ರು ಅಂತೆ. ನನಗೆ ಗೊತ್ತಿಲ್ಲ, ಅವರು ಭೇಟಿ ಮಾಡಿದಾಗ ನ್ಯಾಯ ಕೂಡಿಸಿ ಅಂದ ಕೇಳ್ತಾ ಇದ್ರು. ನಾನು ಅಧಿಕಾರಿಗಳಿಗೆ ಕೇಳಿದ್ದೀನಿ. ಬೇರೆಯವರು ಬಂಧನ ಮಾಡಿಲ್ಲ ಆಕ್ರೋಶ ಇದೆ. ನಾನು ಪೊಲೀಸರಿಗೆ ಹೇಳಿದ್ದೀನಿ. ನನಗೆ ಯಾರು ವಿರೋಧ ಮಾಡಿಲ್ಲ. ಕಟ್ಟಿಮನಿ ಹೇಳಿದ್ರು ಹಿಂದೂ ಸಂಘಟನೆ ಕಾರ್ಯಕರ್ತ ಅಂತ.‌ಅದಕ್ಕೆ ಅವ್ರರನ್ನ ನಾನು ಭೇಟಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

 

ಬಿಜೆಪಿಗೆ ಸಾಮರಸ್ಯ ಇರುತ್ತೋ ಅಲ್ಲಿ ಬೆಂಕಿ ಹಾಕೋದು ಕೆಲಸ. ಯಡಿಯೂರಪ್ಪ ೭೭ ವರ್ಷದ ಹುಟ್ಟು ಹಬ್ಬ ಮಾಡಿಕೊಂಡ್ರು. ಸಿಎಂ ಆದ ಮೇಲೆ ಹುಟ್ಟು ಹಬ್ಬ ಮಾಡಿದ್ರು. ಆಗ ಇವರು ಟೀಕೆ ‌ಮಾಡಿದ್ರಾ..?. ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಆಗ ಆರ್ ಎಸ್ ಎಸ್ ಟೀ‌ಕೆ ಮಾಡಿದ್ರಾ..?. ಬಿ ಎಲ್ ಸಂತೋಷ ಕೂಡ ಕಾರ್ಯಕ್ರಮಕ್ಕೆ ಬಂದಿದ್ರು. ಇದು ಇಬ್ಬಂದಿತನ ಅಲ್ವಾ..?. ೭೫ ವರ್ಷ ಜೀವನದಲ್ಲಿ ಒಂದು ಮೈಲುಗಲ್ಲು. ಅದನ್ನು ಸ್ನೇಹಿತರು ಸೆಲೆಬ್ರೇಷನ್ ಮಾಡ್ತಾ ಇದ್ದಾರೆ. ಇದರಲ್ಲಿ ಟೀಕೆ ಮಾಡೋದು ಏನಿದೆ. ನಮ್ಮ ಓಡಿತೇವಿ ಅಂದ್ರೆ ಅದು ಈಡೇರಲ್ಲ. ಟೀಕೆ ಮಾಡಿದ್ರೆ ಬಿಜೆಪಿ ಪ್ರಯತ್ನ ಈಡೇರಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *