ಮೈಸೂರು : ಇತ್ತಿಚೆಗೆ ರಾಜ್ಯ ರಾಜಕಾತಣದಲ್ಲಿ ಚಡ್ಡಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅದ್ಯಾವಾಗ ಆರ್ ಎಸ್ ಎಸ್ ಚಡ್ಡಿ ಸುಡುವ ಬಗ್ಗೆ ಮಾತನಾಡಿದರೋ ಬಿಜೆಪಿಯಲ್ಲಿರುವ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಬಳಸಿದ ಹಳೆ ಚಡ್ಡಿಗಳನ್ನು ಹೊತ್ತು ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದಿದ್ದರು. ಒಂದು ಹೇಳಿಕೆಗೆ ಬಿಜೆಪಿ ನಾಯಕರು ಮುಗಿಬಿದ್ದ ಪರಿಣಾಮ ಸಿದ್ದರಾಮಯ್ಯ ಅವರು ತಮ್ಮ ಪಕ್ಷದವರ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಒಬ್ವ ನಾತನಾಡಿದ್ರೆ ಅವರು 25 ಜನ ಬರ್ತಾರೆ. ನಾಯಿಗಳು ಬೆನ್ನಟ್ಟಿ ಬರುವಂತೆ ನನ್ನ ವಿರುದ್ಧ ಬರುತ್ತಾರೆ. ಅವರು ಸೀಳು ನಾಯಿ ಥರ ಬಂದರೂ ನಮ್ಮವರು ಒಬ್ಬರು ಮಾತನಾಡುವುದಿಲ್ಲ. ಇದೆ ತಾಪತ್ರಯವಾಗಿರುವುದು ಎಂದಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಅವರು ನಗುತ್ತಾ ನಗುತ್ತಾ ತಮಾಷೆಯಾಗಿ ಹೇಳಿದರು ಆ ಸತ್ಯವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. ಅವರು 25 ಜನ ಮತನಾಡಿದರೆ ನಮ್ಮವರು ಬೆಂಬಲಕ್ಕೆ ನಿಲ್ಲಲ್ಲ ಎಂಬುದು ಒಗ್ಗಟ್ಟನ್ನು ತೋರಿಸುತ್ತಿದೆ.