ಬೆಂಗಳೂರು: ತುಮಕೂರು ಅವ್ರಪ್ಪನ ಜಹಾಗೀರಾ ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ಆಕ್ರೋಶ ಹೊರ ಹಾಕಿದ್ದರು. ಆ ಟ್ವೀಟ್ ಗೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ರು ಅಂತಾನೇ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈಕಟ್ಲಿ. ಅವರು ಬಳಸಿದ ಭಾಷೆ ಅವರ ಸಂಸ್ಕೃತಿ ತೋರಿಸುತ್ತದೆ. ಹೀಗಾಗಿ ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ.
ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರರು. ಮತದಾರ ಕೊಟ್ಟ ತೀರ್ಪನ್ನ ನಾವೂ ಸ್ವೀಕಾರ ಮಾಡಬೇಕು. ನಾನು ಚುನಾವಣೆಯಲ್ಲಿ ಸೋತಿದ್ದೇನೆ ನಿಜ. ಹಾಗಾದ್ರೆ ಅವ್ರಪ್ಪ ಸೋತಿಲ್ವಾ, ಅವ್ರ ಮಗ ಸೋತಿಲ್ವಾ..? ಈಗ ರಾಜ್ಯದ ಜನರೆದುರು ಕಣ್ಣೀರು ಹಾಕ್ತಿರುವುದು ಯಾರೆಂದು ತಿಳಿದಿದೆ. ನಾನೇಕೆ ಕಣ್ಣೀರು ಹಾಕಲಿ. ಇವರ ಭಾಷೆಯೇ ಇವರ ಸಂಸ್ಕೃತಿಯನ್ನ ತೋರಿಸುತ್ತದೆ ಎಂದಿದ್ದಾರೆ.
