ಬೆನ್ನು ನೋವಿನಿಂದ ಪಾದಯಾತ್ರೆಯಿಂದ ವಾಪಾಸ್ ಆದ ಸಿದ್ದರಾಮಯ್ಯ..!

suddionenews
1 Min Read

 

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ 4 ದಿನಕ್ಕೆ‌ ಕಾಲಿಟ್ಟಿದ್ದು, ನಡೆದು ನಡೆದು ಸಿದ್ದರಾಮಯ್ಯ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ.

ನಡೆಯುತ್ತಿದ್ದಾಗಲೇ ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ಅಲ್ಲೇ ರಾಮನಗರದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಹೋಗಿ ವಿಶ್ರಾಂತಿ ಪಡೆದಿದ್ದಾರೆ. ಆ ಬಳಿಕ ಇನ್ನು ಬೆನ್ನು ನೋವು ಹೆಚ್ಚಾದ ಬೆನ್ನಲ್ಲೇ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಬೆಂಗಳೂರಿಗೆ ಬಂದು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಜನವರಿ 9 ರಂದು ಶುರುವಾದ ಪಾದಯಾತ್ರೆಯಲ್ಲಿ ಮೊದಲ ದಿನವೇ ಸಿದ್ದರಾಮಯ್ಯ ಸುಸ್ತಾಗಿದ್ದರು. ಬಳಿಕ ಡಿಕೆ ಶಿವಕುಮಾರ್ ಕೂಡ ಸುಸ್ತಾಗಿದ್ದರು. ಆದರೂ ಹಠ ಬಿಡದ ನಾಯಕರು ಪಾದಯಾತ್ರೆ ಮೂಲಕ ನಡೆಯುತ್ತಲೇ ಇದ್ದಾರೆ. ಬೆಂಗಳೂರು ತಲುಪುವವರೆಗೂ ನಡೆಯುತ್ತಾರೆಂಬ ಹಠ ತೊಟ್ಟಿದ್ದಾರೆ. ಈ ಮಧ್ಯೆ ಹೈಕೋರ್ಟ್ ಬೇರೆ ರತಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ತಡೆಯುವ ಪ್ರಯತ್ನ‌ ಮಾಡುತ್ತಾ ಎಂಬ ಪ್ರಶ್ನೆ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *