ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೆಚ್.ವೈ.ಮೇಟಿ ಅವರ ನಿಧನದಿಂದಾಗಿ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಜೋರಾಗಿಯೇ ನಡೀತಾ ಇದೆ. ಶ್ರೀರಾಮುಲು ಕೂಡ ಬಿಜೆಪಿ ಅಭ್ಯರ್ಥಿ ಚರಂತಿಮಠ ಅವರ ಪರ ಮತಯಾಚನೆ ಮಾಡಿದ್ದು, ಈ ವೇಳೆ ಬಾಗಲಕೋಟೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ – ಶ್ರೀರಾಮುಲು ಎದುರುಬದುರಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.
ಈ ಸಲ ನಾವೂ ಬಿಜೆಪಿಯಲ್ಲಿ ಚರಂತಿಮಠ ಅವರನ್ನು ಗೆಲ್ಲಿಸಬೇಕು ಎಂಬ ವಿಚಾರದಲ್ಲಿ ಎಲ್ಲರೂ ಎಫರ್ಟ್ ಹಾಕ್ತಾ ಇದ್ದೇವೆ. ಚರಂತಿಮಠ್ ಅವರು ಕೂಡ ಬಹಳಷ್ಟು ಒಳ್ಳೊಳ್ಳೆ ಕೆಲಸಗಳನ್ನ ಮಾಡಿದ್ದಾರೆ. 2023ರಲ್ಲಿ ಸೋತಿರಬಹುದು. ಜನರಲ್ಲಿ ಭಾವನೆ ಮೂಡಬಹುದು. ಎರಡೂವರೆ ವರ್ಷಗಳಾಯ್ತಪ್ಪ. ಆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಕೇವಲ ಬೇರೆ ಬೇರೆ ಕಾರಣಗಳಿಂದ ಉವರು ಏನು ಮಾಡೋದಕ್ಕೆ ಆಗಿಲ್ಲ. ಈ ಸಲ ಭಾರತೀಯ ಜನತಾ ಪಾರ್ಟಿಯನ್ನು ಕೈ ಹಿಡಿಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ.
ಐದು ದಿನ ಬಿಡಿ, ಐದು ವರ್ಷಗಳ ಸಿದ್ದರಾಮಯ್ಯ ಅವರು ಇಲ್ಲಿಯೇ ಇದ್ದರು. ಎಂಎಲ್ಎ ಆಗಿ ನಮ್ಮ ಭಾಗದಲ್ಲಿ ಗೆದ್ದಿದ್ದರು. ನನ್ನ ವಿರುದ್ಧವೇ 1600 ವೋಟ್ ಗಳಿಂದ ಗೆದ್ದಿದ್ದರು. ಆ 1600 ವೋಟ್ ಗಳು ಕಳ್ಳ ವೋಟ್ ಗಳಾಗಿದ್ದವು. ಯಾಕಂದ್ರೆ ಸಿ.ಎಂ.ಇಬ್ರಾಹಿಂ, ಪಾಟೀಲ್ ಸಾಹೇಬ್ರುಗಳು ಉಸ್ತುವಾರಿಯಾಗಿದ್ದರು. ಅವರು ಏನು ಹೇಳಿದ್ದರು, ಹತ್ತಿರತ್ತಿರ 2 ಸಾವಿರ ವೋಟ್ ಗಳನ್ನು ಖರೀದಿ ಮಾಡಿ, ಗೆದ್ದಿದ್ದೀವಿ ಅಂದಿದ್ದರು. ಬಹುಶಃ ಅಂದು ಸಿದ್ದರಾಮಯ್ಯ ಸಾಹೇಬರ ಗೆಲುವು ಓಲು ಅಂತಾನೇ ಅರ್ಥ ಎಂದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್