Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಧಾನಸಭೆಯಲ್ಲಿ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ ಸಿದ್ದರಾಮಯ್ಯ – ಡಿಕೆಶಿ

---Advertisement---

ಬೆಂಗಳೂರು: ಖುರ್ಚಿ ಕದನದ ವಿಚಾರ ಇನ್ನು ಕೂಡ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇಂದು ವಿಧಾನಸಭೆಯ ವಿಶೇಷ ಅಧಿವೇಶನದ ಸಮಯದಲ್ಲೂ ಈ ಕುರ್ಚಿ ಕದನದ ವಿಚಾರ ಸದ್ದು ಮಾಡಿದೆ. ಆದರೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಒಗ್ಗಟ್ಟನ್ನ ಪ್ರದರ್ಶನ ಮಾಡಿದ್ದಾರೆ. ನಾನು ಹಾಗೂ ಸಿಎಂ ಪರಸ್ಪರರ ಕಷ್ಟದಲ್ಲಿ ಜೊತೆಯಾಗಿ ನಿಂತವರು ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುಂದೆಯೂ ಕಷ್ಟದಲ್ಲಿ ಪರಸ್ಪರ ಜೊತೆಯಾಗ್ತೇವೆ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ. ನಾವಿಬ್ರೂ ಹೀಗೆ ಜೊತೆಯಾಗಿಯೇ ಇರ್ತೀವಿ. ಏನೇ ತೀರ್ಮಾನ ಇದ್ದರೂ ಪಕ್ಷ ಮಾಡುತ್ತೆ. 2028ಕ್ಕೆ ಏನಾಗುತ್ತೆ ಎಂಬುದನ್ನ ನೋಡೋಣಾ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ ಡಿಕೆಶಿಯನ್ನು ಬಿಟ್ಟು ಕೊಡದ ಸಿಎಂ ಸಿದ್ದರಾಮಯ್ಯ, ಡಿಕೆಶಿ ವೈರಾಗ್ಯದ ಮಾತನ್ನಾಡಿಲ್ಲ. ವಾಸ್ತವಿಕ ಮಾತನ್ನಾಡಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುವಾಗ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಹಾಗೂ ಡಿಕೆಶಿ ನಡುವೆ ಜಗಳ ಇದೆ ಅಂತ ಅಶೋಕ್ ಆರೋಪ ಮಾಡಿದ್ದರು. ಅದನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಮತ್ತು ಡಿಕೆಶಿ ಮಧ್ಯೆ ಜಗಳ ಇದೆ ಎಂದು ಆರೋಪಿಸಿದ್ದಾರೆ. ನಿನಗೂ ನನಗೂ ಕೋಲಾಹಲವಿದೆಯಂತೆ ಕಣಯ್ಯ ಎಂದು ಪಕ್ಕದಲ್ಲಿಯೇ ಕೂತಿದ್ದ ಡಿಕೆ ಶಿವಕುಮಾರ್ ಅವರಿಗೆ ಹೇಳಿದರು. ಈ ಮಾತಿನ ನಡುವೆ ಆರ್ ಅಶೋಕ್ ಅವರು ಮಾತನಾಡುತ್ತಾ, ಒಂದು ಮಾತು ನೂರು ಅರ್ಥ. ಸಮಯ ಯಾವಾಗ ಬರುತ್ತೆ ಅಂತ ಹೇಳಲಿ ಎಂದರು. ಅದೇನೆ ಇರಲಿ, ಅದೆಷ್ಟೇ ಭಿನ್ನಾಭಿಪ್ರಾಯಗಳು ಇರಲಿ ಸಾರ್ವಜನಿಕವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತ್ರ ಮನಸ್ತಾಪ ತೋರಿಸಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now