Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2013ರಲ್ಲಿದ್ದ ಸಿದ್ದರಾಮಯ್ಯನೇ ಬೇರೆ : ಕೆ.ಎನ್.ರಾಜಣ್ಣ

---Advertisement---

ತುಮಕೂರು: ಹೈಕಮಾಂಡ್ ನಾಯಕರ ಮತಗಳ್ಳತನದ ಹೋರಾಟಕ್ಕೆ ರಾಜಣ್ಣ ವಿರುದ್ಧವಾಗಿ ಮಾತಾಡಿದ್ದರ ಪರಿಣಾಮ ಸಚಿವ ಸ್ಥಾನವನ್ನ ಕಳೆದುಕೊಳ್ಳಬೇಕಾಯ್ತು. ಸಚಿವ ಸ್ಥಾನ ಹೋದರು ಕೂಡ ತುಮಕೂರಿನಲ್ಲಿ ಅವರಿಗಿರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇಂದು ಶ್ರೀದೇವಿ ಕಾಲೇಜಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಶಾಕಿಂಗ್ ಹೇಳಿಕೆಯನ್ನ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ಅವರು 2013ರಲ್ಲಿ ಇದ್ದವರೆ ಬೇರೆ, ಈಗಿರುವ ಸಿದ್ದರಾಮಯ್ಯ ಅವರೇ ಬೇರೆ. ಅವರಿಗೆ ಬೇರೆ ಏನು ಒತ್ತಡಗಳಿವೆಯೋ ಏನೋ ಗೊತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಒಂದಷ್ಟು ಒತ್ತಡ ಇದೆ. ಸಿದ್ದರಾಮಯ್ಯ ಅವರ ಪುಣ್ಯದ ಕಾರ್ಯಕ್ರಮ ಅಂದ್ರೆ ಅದು ಅನ್ನಭಾಗ್ಯ ಕಾರ್ಯಕ್ರಮ ಎಂದು ಅಲ್ಲಿಯೂ ಕೊಂಡಾಡಿದ್ದಾರೆ.

ಕೆ.ಎನ್.ರಾಜಣ್ಣ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರಿಗೆ ತುಂಬಾ ಆಪ್ತರು. ಹೈಕಮಾಂಡ್ ಸಚಿವ ಸ್ಥಾನದಿಂದ ತೆಗೆಯುವಂತೆ ಹೇಳಿದಾಗಲೂ, ಎಲ್ಲವನ್ನು ಸರಿ ಮಾಡುವುದಕ್ಕೆ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡಿದ್ದರು ಎಂಬ ಮಾತಿದೆ. ಆದರೂ ಯಾವುದು ವರ್ಕ್ ಆಗಲಿಲ್ಲ, ಕಡೆಗೆ ಸಚಿವ ಸ್ಥಾನಕ್ಕೆ ಕುತ್ತು ಬಂತು. ಇದರ ಹೊರತಾಗಿಯೂ ರಾಜಣ್ಣ, ಸದಾ ಕಾಲ ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತಿದ್ದಾರೆ. ಅವರ ಯೋಜನೆಗಳನ್ನ ಕೊಂಡಾಡಿದ್ದಾರೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅಲ್ಲಿ ರಾಜಣ್ಣ ಧ್ವನಿ ಎತ್ತಿ ಮಾತಾಡ್ತಾ ಇದ್ರು. ಸಿಎಂ ಸ್ಥಾನ ಬದಲಾವಣೆ ಅಂದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇವರು ಚರ್ಚೆ ಶುರು ಮಾಡ್ತಾ ಇದ್ರು. ಹೀಗಾಗಿಯೇ ಡಿಕೆಶಿ ಬಣಕ್ಕೆ ರಾಜಣ್ಣ ಅಂದ್ರೆ ಕೊಂಚ ಬೇಸರ. ಇದೀಗ ಸಿಎಂ ಸಿದ್ದರಾಮಯ್ಯ ಅವರ ವಿಚಾರಕ್ಕೆ ರಾಜಣ್ಣ ಈ ರೀತಿ ಮಾತನಾಡಿದ್ದಾರೆ. ಒತ್ತಡದಿಂದ ಬದಲಾಗಿರಲು ಬಹುದು ಎಂಬ ರೀತಿ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now