ಬೆಂಗಳೂರು: ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು,ನಾನು ದೆಹಲಿ ರಾಜಕಾರಣಕ್ಕೆ ಹೋಗ್ತಿಲ್ಲ ಸೋನಿಯಾ ಜೀ ಮುಂದೆ ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು.
ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರ ಚರ್ಚೆಯೇ ಆಗಿಲ್ಲ,ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದೇನೆ
ನಾನು ಹೇಳಿದ ಮೇಲೂ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ ಅಂದ್ರೇನು? ಯಾರೋ ಬರೆಸುತ್ತಿದ್ದಾರೆ ಅಂತ ಅನಿಸುತ್ತೆ
ಅವರಿಗೆ ಎಥಿಕ್ಸ್ ಇಲ್ಲ ಎಂದು ನಾನು ಹೇಳಬೇಕಾಗುತ್ತೆ ನಾನು ಹೇಳಿದ ಮೇಲೂ ಬರೆಯುತ್ತಾರೆ ಅಂದ್ರೆ ಏನು ಅರ್ಥ ಎಂದರು.
ಇನ್ನೂ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲುವುದಕ್ಕೆ ಸಿದ್ದರಾಮಯ್ಯ ಕಾರಣ ಅಂತ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,
ಹಾಗಾದ್ರೆ ಹಾಸನದಲ್ಲಿ ಗೆದ್ದಿದ್ದು ಹೇಗೆ? ಗೆಲ್ಲಿಸಿದ್ದು ಯಾರು?
ಮಂಡ್ಯದಲ್ಲಿ ಸೋಲಿಸುವ ಶಕ್ತಿ ಇದಿಯಲ್ಲಯ್ಯಾ ಬೆನ್ನುತಟ್ರಯ್ಯಾ ಎಂದು ಕುಮಾರಸ್ವಾಮಿ ವಿರುದ್ಧ ತಿರುಗೇಟು ನೀಡಿದರು.