ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಸೆ. 01 : ನಗರದ ಹೂರ ವಲಯದಲ್ಲಿನ ಲಕ್ಷ್ಮಿ ಸಾಗರ ಗೇಟ್ ಬಳಿಯಲ್ಲಿನ ಶ್ರೀ ತುಳಜಾ ಭವಾನಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ “ಶ್ರಾವಣ ಮಾಸದ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತುಳಜಾ ಭವಾನಿ ಅಮ್ಮನವರಿಗೆ ವಿಶೇಷವಾದ ಪೂಜೆಯನ್ನು ನಡೆಸಲಾಯಿತು, ಈ ಸಮಯದಲ್ಲಿ ಅಮ್ಮನವರಿಗೆ ವಿವಿಧ ರೀತಿಯ ಹೂಗಳಿಂದ ಆಲಂಕಾರವನ್ನು ಮಾಡಲಾಗಿತ್ತು. ಮಧ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಇದರಲ್ಲಿ ಸುಮಾರು 800 ರಿಂದ 1000 ಜನ ಭಕ್ತಾಧಿಗಳು ಅನ್ನ ದಾಸೋಹದಲ್ಲಿ ಭಾಗವಹಿಸಿದ್ದರು. ತುಳಜಾ ಭವಾನಿ ದೇವಸ್ಥಾನ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಭಕ್ತಾದಿಗಳು ಮತ್ತು ಭಾವಸಾರ ಕ್ಷತ್ರಿಯದ ಸಮಾಜದ ಎಲ್ಲಾ ಬಾಂಧವರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶ್ರೀ ತುಳಜಾ ಭವಾನಿ ದೇವಸ್ಥಾನ ಸೇವಾ ಟ್ರಸ್ಟ್ ಎಂ.ಇ. ಸಂತೋಷ ಬಾಬು, ದಾಸ್ಯ ನಾಯ್ಕ್, ನಾಗರಾಜ್ ಜೆ, ಬಸವರಾಜು, ಮಂಜುನಾಥ್, ಮಾಯಣ್ಣ, ಅಜ್ಜಯ್ಯ, ಪೂಜಾರ್ ಗಂಗಣ್ಣ, ಧನುಕುಮಾರ್, ಕೋಟ್ರೇಶ್ ದರ್ಶನ, ಪೂಜಾ ಸಂತೋಷ ಸೇರಿದಂತೆ ಇತರರು ಭಾಗವಹಿಸಿದ್ದರು.










