Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಕ್ಕು ದಾರಿ ದಾಟಿದರೆ ನಿಂತು ಹೋಗಬೇಕೆ? ಶಕುನ ಶಾಸ್ತ್ರ ಹೇಳುವುದೇನು

---Advertisement---

ನಾವು ಯಾವುದೋ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಸಾಕು, ಅಲ್ಲಿಗೆ ಒಂದು ನಿಮಿಷ ನಿಂತು ಅಥವಾ ದಾರಿ ಬದಲಿಸಿ ಹೋಗುವವರೇ ಹೆಚ್ಚು.ಹಿಂದೂ ಸಂಪ್ರದಾಯದಲ್ಲಿ ‘ಶಕುನ ಶಾಸ್ತ್ರ’ಕ್ಕೆ ಬಹಳ ಮಹತ್ವದ ಸ್ಥಾನವಿದೆ. ಶಕುನಶಾಸ್ತ್ರದ ಬೆಕ್ಕಿನ ಬಗ್ಗೆ ಏನು ಹೇಳುತ್ತದೆ.

ಬೆಕ್ಕುಗಳು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಎಂದು ನಂಬಲಾಗಿದೆ. ಆದರೆ ಭಾರತೀಯ ಶಕುನ ಶಾಸ್ತ್ರದ ಪ್ರಕಾರ, ಪದೇ ಪದೇ ಬೆಕ್ಕುಗಳು ನಿಮ್ಮ ಹಾದಿಯಲ್ಲಿ ಸಿಗುತ್ತಿದ್ದರೆ ಅಥವಾ ನಿಮ್ಮ ಮನೆಯ ಸುತ್ತ ಕಪ್ಪು ಬೆಕ್ಕುಗಳು ಓಡಾಡುತ್ತಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ಕೆಟ್ಟ ದೃಷ್ಟಿಯ (Evil Eye) ಪ್ರಭಾವವಿದೆ ಎಂಬುದರ ಸಂಕೇತವಾಗಿದೆ. ಕೆಲವು ಸಂದರ್ಭಗಳಲ್ಲಿ ಇದು ಮಾಟ-ಮಂತ್ರದಂತಹ ನಕಾರಾತ್ಮಕ ಕ್ರಿಯೆಗಳ ಸೂಚಕವೂ ಇರಬಹುದು ಎಂದು ಹೇಳಲಾಗುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕುಗಳನ್ನು ‘ರಾಹು’ ಮತ್ತು ‘ಕೇತು’ ಗ್ರಹಗಳ ವಾಹನ ಅಥವಾ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳು ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ, ಗೊಂದಲ ಮತ್ತು ಅಡೆತಡೆಗಳನ್ನು ತರುವ ಗ್ರಹಗಳು. ಕಪ್ಪು ಬೆಕ್ಕು ದಾರಿ ದಾಟಿದಾಗ, ಅದು ರಾಹುವಿನ ಪ್ರಭಾವವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು ಅಥವಾ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಬೆಕ್ಕು ದಾರಿ ದಾಟಿದ ತಕ್ಷಣ ಒಂದು ಕ್ಷಣ ನಿಂತು, ದೇವರನ್ನು ಸ್ಮರಿಸಿ ಅಥವಾ ಇಷ್ಟ ದೇವತೆಯ ಮಂತ್ರ ಜಪಿಸಿ ಮುಂದುವರಿಯಿರಿ.ಮದುವೆಯಂತಹ ಕಾರ್ಯಕ್ಕೋ ಹೋಗುವಾಗ ಬೆಕ್ಕು ಅಡ್ಡ ಬಂದರೆ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಹೋಗುವುದು ಉತ್ತಮ.ಶಕುನ ಶಾಸ್ತ್ರವು ನಮಗೆ ಎಚ್ಚರಿಕೆಯಿಂದ ಇರಲು ಕಲಿಸುತ್ತದೆ. ಆದರೆ ಅತಿಯಾದ ಭಯ ಬೇಡ

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now