ರಾಯಚೂರು: ಮರಾಠಿಗರು ಕ್ಯಾತೆ ತೆಗೆಯುವುದು ಇಂದು ನಿನ್ನೆಯದ್ದಲ್ಲ. ಆಗಾಗ ತೆಗೆಯುತ್ತಲೆ ಇರುತ್ತಾರೆ. ಇತ್ತಿಚೆಗೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಮಸಿಯಲ್ಲಿ ಬರೆಯುವ ಮೂಲಕ ಗಲಭೆ ಸೃಷ್ಟಿಸಿದ್ದರು. ಈ ಸಂಬಂಧ ನಟ ಶಿವರಾಜ್ಕುಮಾರ್ ಮಾತನಾಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಯಾರು ದೊಡ್ಡದು ಮಾಡಬಾರದು ಎಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ನೆಲ, ಜಲ, ಭಾಷೆ ಎಂದು ಬಂದಾಗ ಅಂದಿನ ಇಡೀ ಚಿತ್ರರಂಗ ಒಗ್ಗಟ್ಟಾಗಿ ನಿಲ್ಲುತ್ತಾ ಇದ್ದರು. ಚಳುವಳಿಗಳನ್ನು ನಡೆಸುತ್ತಿದ್ದರು. ಅದರಲ್ಲೂ ಈ ವಿಚಾರದಲ್ಲಿ ಅಣ್ಣಾವ್ರು ಸದಾ ಮುಂದೆ ನಿಲ್ಲುತ್ತಿದ್ದರು. ಇದೀಗ ಗಡಿ ವಿವಾದದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿ, ಗಡಿ ವಿವಾದ ಸಮಯದಲ್ಲಿ ಸಿನಿಮಾರಂಗ ಯಾವಾಗಲೂ ಒಗ್ಗಟ್ಟಾಗಿರುತ್ತದೆ. ಕನ್ನಡಪರ ಹೋರಾಟ ಎಂದರೆ ಚಿತ್ರರಂಗದ ಎಲ್ಲಾ ನಟರು ಬರುತ್ತಾರೆ. ಮೊದಲು ನಾವೂ ಎಲ್ಲಿದ್ದೀವಿ ಆ ಸ್ಥಳಕ್ಕೆ ಎಲ್ಲರು ಗೌರವ ಕೊಡಬೇಕು ಎಂದು ಗಡಿ ವಿವಾದದ ವಿಚಾರವಾಗಿ ಮಾತನಾಡಿದ್ದಾರೆ.
ಶಿವಣ್ಣ ಇಂಡಸ್ಟ್ರಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ವೇದ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಮಂತ್ರಾಲಯದ ಮಠಕ್ಕೆ ಸಿನಿಮಾ ತಂಡ ಭೇಟಿ ನೀಡಿ, ಗುರುರಾಯರ ಆಶೀರ್ವಾದ ಪಡೆದುಕೊಂಡಿದೆ. ಈ ವೇಳೆ ಗಡಿ ವಿವಾದ ಕುರಿತು ಮಾತನಾಡಿದ್ದಾರೆ.