ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ ಅಮ್ಮಾ ಕೈ ರೆಸ್ಟೋರೆಂಟ್ ಆರಂಭಿಸಿದ್ದಾರೆ.ಅಮ್ಮಾ ಕೈ ರೆಸ್ಟೋರೆಂಟ್ ಭಾರಿ ಜನಪ್ರಿಯತೆ ಪಡೆದಿದೆ. ಇಲ್ಲಿ ಕರ್ನಾಟಕದ ವಿಶೇಷ ಮಸಾಲದೋಸೆ, ಬೆಣ್ಣೆ ದೋಸೆ, ಕರಾವಳಿಯ ಕೊಟ್ಟೆ ಕಡಬು, ಕೋರಿ ರೊಟ್ಟಿ ಸೇರಿದಂತೆ ಹಲವು ಖಾದ್ಯಗಳು ದೊರೆಯುತ್ತವೆ.
ಅಮ್ಮಾ ಕೈ ರೆಸ್ಟೋರೆಂಟ್ ಫುಡ್ ಮೆನುವಿನಲ್ಲಿ ಕರ್ನಾಟ ಭೂಪಟ ಹಾಗೂ ಇಲ್ಲಿನ ವಿಶೇಷ ಖಾದ್ಯಗಳನ್ನು ಅದೇ ಹೆಸರಿನಲ್ಲಿ ನೀಡಲಾಗಿದೆ. ಕರ್ನಾಟಕದ ಬಹುತೇಕ ಭಾಗದ ಎಲ್ಲಾ ವಿಶೇಷ ಖಾದ್ಯಗಳು ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ.
ಮೆಣಸಿನಕಾಯಿ ಬಜ್ಜಿ, ಪುಳಿಯೋಗರೆ, ಚಿಕನ್ ಬೆಂಗಳೂರು ಕಬಾಬ್, ಪನ್ನೀರ್ ಟೋಮೋಟೋ ಗೊಜ್ಜು, ಮೈಸೂರು ಮಸಾಲ ಬೇಬೆ ಪೋಟೆಟೋ, ಮೈಸೂರು ಮಸಾಲಾ ಎಗ್ ಬುರ್ಜಿ, ಕೂರ್ಗ್ ಪಂದಿ ಕರಿ, ಕೂರ್ಕ್ ಚಿಕನ್ ಸಾಸೆಜ್ ನಾನ್ ರೋಲ್, ಕರಾವಳಿಯ ಅಂಜಲ್ ಫ್ರೈ, ಬೆಳಗಾವಿ ಚಿಕನ್ ಕರಿ,ಕರಾವಳಿಯ ಮಂಗಳೂರು ಫಿಶ್ ಕರಿ, ಕೋರಿ ಗಸಿ, ಕೋರಿ ಪುಳಿಮುಂಚಿ ಸೇರಿದಂತೆ ಕರ್ನಾಟಕ ಪ್ರತಿ ಜಿಲ್ಲೆಯ ವಿಶೇಷ ಖಾದ್ಯಗಳು ಅದೇ ಹೆಸರಿನಲ್ಲಿ ಲಭ್ಯವಿದೆ.



