ಚಿಕ್ಕೋಡಿ: ಇಂದು ಯುಗಾದಿ ಹಬ್ಬ. ನಾಳೆ ಎಲ್ಲೆಡೆ ಹೊಸ ತಡುಕು. ಮಾಂಸ ಖರೀದಿ ಮಾಡಲು ಮುಸ್ಲಿಂ ಅಂಗಡಿಗೆ ಹೋಗಬೇಡಿ, ಹಲಾಲ್ ಕಟ್ ನಿಷೇಧಿಸಿ ಎಂದು ಈಗಾಗಲೇ ಹೇಳಲಾಗುತ್ತಿದೆ. ಈ ಸಂಬಂಧ ಸಚುವೆ ಶಶಿಕಲಾ ಜೊಲ್ಲೆ ಮಾತನಾಡಿದ್ದು, ವಿಶ್ವ ಹಿಂದೂಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಹಲಾಲ್ ಕಟ್ ನಿಷೇಧ ಮಾಡುತ್ತಿದ್ದಾರೆ. ಸರ್ಕಾರ ಆ ಬಗ್ಗೆ ಚಿಂತನೆ ಮಾಡುತ್ತೆ. ಅದರ ಜೊತೆಗೆ ನಮ್ಮ ಹಿರಿಯ ಸಚಿವರು ಜೊತೆಗೆ ನಮ್ಮ ಸಿಎಂ ಕೂಡ ಆ ಬಗ್ಗೆ ಚಿಂತನೆ ಮಾಡುತ್ತಾರೆ ಅನ್ನೋದು ಅಭಿಪ್ರಾಯವಾಗಿದೆ.
ಈಗ ಹಲಾಲ್ ಕಟ್ ಅನ್ನೋದನ್ನ ಅವರು ತಮ್ಮ ದೇವರಿಗೆ ಅರ್ಪಣೆ ಮಾಡಿರುತ್ತಾರೆ ಅನ್ನೋದು ನಮಗೆ ಗೊತ್ತಾಗುತ್ತೆ. ಆ ವಿಚಾರ ಎಲ್ಲಾ ಕಡೆಗೂ ಹರಿದಾಡುತ್ತಿದೆ. ಹೀಗಾಗಿ ನಾವೂ ಕೂಡ ಅದನ್ನ ನಿಷೇಧ ಮಾಡಿದ್ದೇವೆ. ಅದರ ಬದಲಿಗೆ ಜಟ್ಕಾ ಕಟ್ ಮಾಡಿರುವುದನ್ನ ತೆಗೆದುಕೊಳ್ಳುವಂತದ್ದು ಆಗಬೇಕು ಎಂಬ ಅಭಿಪ್ರಾಯ ಇದೆ. ಆದರೆ ಆ ಬಗ್ಗೆಯೂ ನಾವೂ ಚಿಂತನೆ ಮಾಡಬೇಕಿದೆ. ಅವರು ಯಾವ ರೀತಿ ಆ ಕಟ್ ಮಾಡುತ್ತಿದ್ದರು. ಅದನ್ನ ಅವರ ದೇವರಿಗೆ ಅರ್ಪಿಸುತ್ತಿದ್ದರ..? ನಾವೂ ಅದನ್ನ ದೂಷಿತ ರಕ್ತ ಹೋಗಬೇಕು ಎಂಬ ಕಾರಣಕ್ಕೆ ಆ ರೀತಿ ಕಟ್ ಮಾಡುತ್ತೇವೆ ಅಂತ ಹೇಳುತ್ತಾ ಇದ್ದರು. ಆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತೆ ಎಂದಿದ್ದಾರೆ.
ನಾನು ಆ ಬಗ್ಗೆ ಏನನ್ನು ಹೇಳಲು ಬಯಸಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟಾಗಿ ಇಲ್ಲ. ಹಿಂದೂ ಪರ ಸಂಘಟನೆಗಳು ಮಾಡುತ್ತಿರುವುದು ಸರಿ ಅನ್ನಿಸುತ್ತೆ. ಜಟ್ಕಾ ಕಟ್ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ನಾವೂ ಹಿಂದೂ ಪರ ಸಂಘಟನೆ ಪರ ಇದ್ದೇವೆ. ಆದರೆ ಜವಬ್ದಾರಿಯುತ ಸಚುವೆಯಾಗಿ ಆ ಬಗ್ಗೆ ತಿಳಿದುಕೊಳ್ಳದೆ ಮಾತನಾಡುವುದಿಲ್ಲ. ಹಲಾಲ್ ಮತ್ತು ಜಟ್ಕಾ ಕಟ್ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.