Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಚಿಕೆ ಆಗ್ಬೇಕು.. ನಾಚಿಕೆ ಆಗ್ಬೇಕು.. ಸದನದಲ್ಲಿ ಕುಮಾರಸ್ವಾಮಿ ಮತ್ತು ಚೆಲುವರಾಯಸ್ವಾಮಿ ನಡುವೆ ಮಾತಿನ ಯುದ್ದ…!

Facebook
Twitter
Telegram
WhatsApp

 

ಬೆಂಗಳೂರು: ಇಂದು ವಿಧಾನಸಭೆಯಲ್ಲಿ ನಡೆದ ಸದನದಲ್ಲಿ ನಾಗಮಂಗಲದ ಕೆಎಸ್ಆರ್ಟಿಸಿ ಚಾಲಕನ ಆತ್ಮಹತ್ಯೆ ಪ್ರಕರಣ ಸದ್ದು ಮಾಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಈ ವಿಚಾರ ವಾಗ್ಯುದ್ದಕ್ಕೆ ಕಾರಣವಾಗಿತ್ತು. ಸದನದಲ್ಲಿಯೇ ಏಕವಚನದಲ್ಲಿಯೇ ಯುದ್ಧಕ್ಕೆ ನಿಂತು ಬಿಟ್ಟರು. ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಮಧ್ಯೆ ಈ ರೀತಿಯಾಗಿದೆ.

ನಾನು ವರ್ಗಾವಣೆಯ ಬಗ್ಗೆ ಯಾರಿಗೂ ಕರೆ ಮಾಡಿಲ್ಲ, ಯಾವ ಪತ್ರನೂ ಕೊಟ್ಟಿಲ್ಲ. ಚಾಲಕನ ಕುಟುಂಬದವರೇ ವರ್ಗಾವಣೆ ರದ್ದು ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯವರಿಗೆ ಕರೆ ಮಾಡಿ ವಿಚಾರಿಸಿದ್ದೆ. ಅನಿವಾರ್ಯ ಇದ್ದರೆ ವರ್ಗಾವಣೆ ಮಾಡಿ, ಇಲ್ಲಾಂದ್ರೆ ಬೇಡ ಎಂದಿದ್ದೆ. ಈ ಹಿನ್ನೆಲೆಯಲ್ಲಿ ಹೋಲ್ಡ್ ಮಾಡಿದ್ದಾರೆ. ವರ್ಗಾವಣೆ ಆದ ಮೂರು ದಿನಗಳ ಬಳಿಕ KSRTC ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಮಾರಸ್ವಾಮಿ ಅವರ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದ ವಿಚಾರ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಚಲುವರಾಯಸ್ವಾಮಿ ಮಾತಿಗೆ ಉತ್ತರಿಸಿದ ಹೆಚ್‌ಡಿಕೆ ಇವರು ಎಲ್ಲಾ ಹಳೇ ಚರಿತ್ರೆ ತೆಗೆದಿದ್ದಾರೆ. ಸಿದ್ದರಾಮಯ್ಯನವರ ತೆಗೆಯುವ ಬಗ್ಗೆ ಎಲ್ಲಾ ಹೇಳಿದ್ದಾರೆ. ಚಲುವರಾಯಸ್ವಾಮಿಯನ್ನು ಮಂತ್ರಿ ಮಾಡೋಕೆ ನಾವೆಲ್ಲ ಏನೇನು ಮಾಡಬೇಕಿತ್ತು. ಎಲ್ಲವನ್ನೂ ಚರ್ಚೆ ಮಾಡೋಣ. ದೇವೇಗೌಡರು ಸರ್ಕಾರ ವಿಸರ್ಜನೆ ಮಾಡಿದಾಗ ಇವ್ರು ನನ್ನ ಕಾಲು ಕಟ್ಟಿಕೊಳ್ಳೋಕೆ ಬಂದಿದ್ರು. ಇವರ ನನ್ನ ಬಗ್ಗೆ ಮಾತನಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚೆಲುವರಾಯಸ್ವಾಮಿ ಅವರು, ಸಿಡಿ ಇದೆ ಅದಿದೆ ಅನ್ನೋದನ್ನ ಬಿಡಿ. ಅನಾವಶ್ಯಕವಾಗಿ ತೇಜೋವಧೆ ಮಾಡೋದನ್ನ ಬಿಡಿ. ನಿಮಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಅವರು ನಿನ್ಗೆ ನಾಚ್ಕೆ ಆಗ್ಬೇಕು ಕೂತ್ಕೊ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಕ್ಕಳೇ ಕನ್ನಡ ಭಾಷೆ ಉಳಿಸಿ ಬೆಳೆಸುವ ರಾಯಭಾರಿಗಳು : ಟಿ.ಪಿ.ಉಮೇಶ್

ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 13 : ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಪ್ರಸ್ತುತ ಅನ್ಯಭಾಷಿಕರು ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ ಮತ್ತು ಔದ್ಯೋಗಿಕ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ನಮ್ಮ

ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ : ಗ್ರಾಹಕರು ಕಂಗಾಲು..!

ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದು ಮನೆಯಲ್ಲಿ ಅಡುಗೆ ಮಾಡುವವರ ಪಾಲಿಗೆ, ಹೊಟೇಲ್ ಉದ್ಯಮಿಗಳಿಗೆ ಹೆಚ್ಚು ತಲೆ ನೋವಾಗಿದೆ. ಹೀಗೆ ದಿನನಿತ್ಯ ಬಲಸುವ ಪದಾರ್ಥಗಳು ಹೀಗೆ ಬೆಲೆ ಏರಿಕೆಯಾಗುತ್ತಲೇ ಇದ್ದರೆ

ಮಹಿಳೆಯರೆ ಎಚ್ಚರ : ಚಿತ್ರದುರ್ಗದಲ್ಲಿ ಕಾಂಪೌಂಡ್ ಗೆ ನುಗ್ಗಿ ಚಿನ್ನದ ಸರ ಕದ್ದ ಖದೀಮರು..!

ಚಿತ್ರದುರ್ಗ: ಚಿನ್ನದ ಸರ ಕದಿಯುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪೊಲೀಸರು ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ, ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೆ ಇದ್ದಾರೆ. ರಸ್ತೆಯಲ್ಲಿ ಹೋಗುವಾಗ, ಒಂಟಿ ಹೆಂಗಸರನ್ನ

error: Content is protected !!