ಬೆಂಗಳೂರು: ಚಾರುಲತಾ ಸಿನಿಮಾಗಾಗಿ ಮಾಡಿದ್ದ ಸಾಲವನ್ನ ವಾಪಾಸ್ ನೀಡುವಂತೆ ಸೆಷನ್ ಕೋರ್ಟ್ ದ್ವಾರಕೀಶ್ ಗೆ ಒಂದು ತಿಂಗಳ ಗಡುವು ನೀಡಿದೆ. 2019 ರಲ್ಲಿ ಮಾಡಿದ್ದ ಸಾಲವದು. ಈ ಸಂಬಂಧ ಕೆಳ ನ್ಯಾಯಲಯದ ತೀರ್ಪು ಪ್ರಶ್ನಿಸಿ ಸೇಷನ್ ಕೋರ್ಟ್ ಗೆ ಹೋಗಿದ್ದರು. ಇದೀಗ ಅಲ್ಲಿಯೂ ದ್ವಾರಕೀಶ್ ಗೆ ಹಿನ್ನಡೆಯಾಗಿದೆ.
2019 ರಲ್ಲಿ ದ್ವಾರಕೀಶ್ ಚಾರುಲತಾ ಸಿನಿಮಾ ಮಾಡಲು ಕೆಸಿಎನ್ ಚಂದ್ರಶೇಖರ್ ಅವರಿಂದ 50 ಲಕ್ಷ ಸಾಲ ಪಡೆದಿದ್ದರು. ದ್ವಾರಕೀಶ್ ಅವರ ಸಂಬಂಧಿ ಸಂಜೀವ್ ಮಧ್ಯಸ್ಥಿಕೆ ವಹಿಸಿದ್ದರು. ಸಾಲ ಪಡೆಯುವಾಗ ದ್ವಾರಕೀಶ್ ಚೆಕ್ ವೊಂದನ್ನ ನೀಡಿದ್ರು. ಆದ್ರೆ ಸಿನಿಮಾ ರಿಲೀಸ್ ಆದ್ಮೇಲು ಹಣ ವಾಪಾಸ್ ನೀಡದೆ ಸತಾಯಿಸುತ್ತಿದ್ದರು.
ಬಳಿಕ ಕೆಸಿಎನ್ ಚಂದ್ರಶೇಖರ್ ಕೋರ್ಟ್ ಮೊರೆ ಹೋಗಿದ್ದರು. ದ್ವಾರಕೀಶ್ ಅಲ್ಲಿಯೂ ಆ ಚೆಕ್ ನಾನ್ ಕೊಟ್ಟಿಲ್ಲ, ಸಹಿ ನನ್ನದಲ್ಲ ಅಂತ ವಾದ ಮಾಡಿದ್ರು. ಫೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ಅವರದ್ದೇ ಎಂದು ದೃಢವಾಗಿತ್ತು. ಕೋರ್ಟ್ ಚಂದ್ರಶೇಖರ್ ಅವರಿಗೆ ಹಣ ಹಿಂತಿರುಗಿಸುವಂತೆ ದ್ವಾರಕೀಶ್ ಅವರಿಗೆ ಸೂಚಿಸಿತ್ತು. ಆ ಬಳಿಕವೂ ದ್ವಾರಕೀಶ್ ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸೆಷನ್ ಕೋರ್ಟ್ ಗೆ ಹೋಗಿದ್ದರು. ಇದೀಗ ಅಲ್ಲಿಯೂ ದ್ವಾರಕೀಶ್ ಗೆ ಹಿನ್ನಡೆಯಾಗಿದೆ ಕೆಳ ನ್ಯಾಯಲಯದ ತೀರ್ಪನ್ನ ಸೆಷನ್ ಕೋರ್ಟ್ ಎತ್ತಿ ಹಿಡಿದಿದೆ.