Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾಜಿ ಸಚಿವ ರೇವಣ್ಣ ವಿರುದ್ಧ ಗಂಭೀರ ಆರೋಪ : ಆಕ್ಸಿಡೆಂಟ್ ಪರಿಹಾರ ಕೊಡ್ತೀನಿ ಅಂತ ಅವಮಾನ ಮಾಡಿದ್ರಾ..?

---Advertisement---

ಮಾಜಿ ಸಚಿವ ರೇವಣ್ಣ ಹೆಚ್.ಎಂ.ರೇವಣ್ಣ ಪುತ್ರ ಇತ್ತೀಚೆಗೆ ಆಕ್ಸಿಡೆಂಟ್ ಒಂದನ್ನ ಮಾಡಿದ್ದರು. ಆ ಆಕ್ಸಿಡೆಂಟ್ ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಆದರೆ ಅವರಿಗೆ ಪರಿಹಾರ ನೀಡುವುದಾಗಿ ಕರೆಸಿದ್ದಂತ ರೇವಣ್ಣ ಅವರು, ಪೋಷಕರಿಗೆ ಅವಮಾನ ಮಾಡಿ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಮ್ಮ ಮಗ ಸಾಯುವುದಕ್ಕೆ ನಮ್ಮ ಕಾರೇ ಬೇಕಿತ್ತಾ..? ಎರಡು ಲಕ್ಷ ಕೊಡ್ತೇನೆ ಸುಮ್ಮನೆ ತೆಗೆದುಕೊಂಡು ಹೋಗಿ ಎಂದು ಮೃತ ರಾಜೇಶ್ ಅಪ್ಪ – ಅಮ್ಮನಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ಮುಂದುವರೆದು, ನಮ್ಮ ಕಾರಿಗೆ ಇನ್ಶುರೆನ್ಸ್ ಇದೆ. ಈ ಕೇಸನ್ನ ನ್ಯಾಯಾಲಯದಲ್ಲಿಯೇ ನೋಡಿಕೊಳ್ಳೋಣಾ. ಮಾಧ್ಯಮಗಳ ಮುಂದೆ ಹೋಗಿ ನಮ್ಮ ಮರ್ಯಾದೆಯನ್ನ ತೆಗೆದಿದ್ದೀರಿ. ಬೇಕಿದ್ದರೆ ಎರಡು ಲಕ್ಷ ಹಣ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಹೋಗಿ ಎಂದು ಮಾತನ್ನಾಡಿದ್ದಾರಂತೆ.

ಅಂದು ಆಕ್ಸಿಡೆಂಟ್ ವಿಚಾರದಲ್ಲಿ ಅವರ ಮಗನ ಹೆಸರು ಬಂದಾಗ ಮಾಧ್ಯಮದವರ ಮುಂದೆ ಪರಿಹಾರ ನೀಡುವ ಮಾತುಗಳನ್ನಾಡಿದ್ದರು. ಕಾರು ಚಾಲಕನ ಅಚಾತುರ್ಯ ಎಂದಿದ್ದರು. ಈಗ ಪರಿಹಾರಕ್ಕೆ ಹೋದಾಗ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಅವರ ಮಾತುಗಳಿಂದ ನೊಂದ ರಾಜೇಶ್ ತಂದೆ – ತಾಯಿ ಪರಿಹಾರದ ಹಣವನ್ನು ಪಡೆಯದೆ ಹಾಗೇ ಬಂದಿದ್ದಾರೆ. ಕಳೆದ ಡಿಸೆಂಬರ್  11ರ ತಡರಾತ್ರಿ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ  ಅಪಘಾತ ನಡೆದಿತ್ತು. ರೇವಣ್ಣ ಪುತ್ರ ಶಶಾಂಕ್ ಕಾರು ಡಿಕ್ಕಿ ಹೊಡೆದು  ಬಿಳಗುಂಬ ಗ್ರಾಮದ 23 ವರ್ಷದ ರಾಜೇಶ್ ಮೃತಪಟ್ಟಿದ್ದ.  ಘಟನೆ ನಡೆದಾಗ ಮೃತನ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೆಚ್.ಎಂ.ರೇವಣ್ಣ ಹೇಳಿದ್ದರು. ಆದರೆ ಈಗ ಉಲ್ಟಾ ಹೊಡೆದರಾ ಎಂಬ ಪ್ರಶ್ನೆ ಕಾಡುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now