ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಏಪ್ರಿಲ್. 14 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಪ್ರತಿಷ್ಠಿತ ಮಹೇಶ್ ಪಿ.ಯು ಕಾಲೇಜು 2024-25 ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಶೇ. 98 ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ.
ಒಟ್ಟು 24 ವಿದ್ಯಾರ್ಥಿಗಳು ಡಿಸ್ಟಂಕ್ಷನ್ , 87 ಪ್ರಥಮ, 14 ದ್ವಿತೀಯ ಮತ್ತು 05 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮಹೇಶ್ ಪದವಿ ಪೂರ್ವ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರೀಲಕ್ಷ್ಮಿ ಜಿ. ಹೆಚ್ 579 ಅಂಕಗಳನ್ನ ಪಡೆದು ಪ್ರಥಮ ಹಾಗೂ ಜಿಲ್ಲಾಮಟ್ಟದಲ್ಲಿ 4 ನೇ ಸ್ಥಾನಗಳಿಸುರುತ್ತಾರೆ. ವಿನಯ್ ಆರ್ 578 ದ್ವಿತೀಯ ಹಾಗೂ ಸೈಯದಾ ಆಯಶಾ 571 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯವರಾದ ವಿಜಯಕುಮಾರ್ ಬಿ, ಕಾರ್ಯದರ್ಶಿಗಳು, ಮತ್ತು ಪೃಥ್ವೀಷ ಎಸ್.ಎಮ್, ನಿರ್ದೇಕರು, ಮತ್ತು ಕೆಂಚನಗೌಡ ಎಸ್.ಜೆ, ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಶುಭಕೋರಿದ್ದಾರೆ.
ಶೈಕ್ಷಣಿಕ ವರ್ಷದಲ್ಲಿ ಮಹೇಶ್ ಪದವಿ ಪೂರ್ವ ಕಾಲೇಜು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅತ್ಯತ್ತಮ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಕಲಿಕಾ ಪ್ರೋತ್ಸಾಹವನ್ನು ನೀಡುತ್ತದೆ. ಈ ಕಾಲೇಜಿನ ವಿಶೇಷತೆ ಏನೆಂದರೆ ಜೆಇಇ, ನೀಟ್ ಮತ್ತು ಕೆಸಿಇಟಿ ತರಗತಿಗಳಿಗೆ ಟಾರ್ಗೆಟ್ ತಂಡವನ್ನು ರಚಿಸಿ ಅತ್ಯುತ್ತಮ ಅನುಭವವುಳ್ಳ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ಮತ್ತು ಮಕ್ಕಳ ಯಶಸ್ಸಿಗೆ ಸಾಯಂಕಾಲ 5.30 ರಿಂದ 7.30 ರ ವರೆಗೆ ವಿಶೇಷ ತರಗತಿಗಳನ್ನು ನೀಡುವುದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಹಾಗೂ ಪಠ್ಯೇತರ ಚಟುವಟಿಕೆಳನ್ನು ನೀಡುವ ಮೂಲಕ ಮತ್ತು ವಿಶೇಷವಾಗಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲೆಂದು ಎಸಿ (Air Conditioned) ತರಗತಿಗಳ ಕೊಠಡಿಗಳ ಸೌಲಭ್ಯವನ್ನು ನೀಡುವ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿದೆ.
ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್