ಕಾಂಜಿಪೀಂಜಿ ಗಾಂಜಾಗಳನ್ನ ಬಿಟ್ಟು ಹಲ್ಲೆ ಮಾಡಿಸ್ತಾರೆ : ಕಾಂಗ್ರೆಸ್ ಬಗ್ಗೆ SDPI ಜಿಲ್ಲಾಧ್ಯಕ್ಷ ಕಿಡಿ

suddionenews
1 Min Read

ಮಂಗಳೂರು: ಜಿಲ್ಲೆಯಲ್ಲಿ ನಮ್ಮ ಎಸ್ ಡಿ ಪಿ ಐ ನವರು ಬೆಳೆಯುತ್ತಿದ್ದಾರೆ. ಹೀಗಾಗಿ ಅದನ್ನ ಕೆಲವರಿಂದ ಸಹಿಸಲು ಸಾಧ್ಯವಾಗ್ತಿಲ್ಲ. ಅದಕ್ಕೆ ಕಾಂಜಿಪೀಂಜಿ ಗಾಂಜಾಗಳನ್ನ ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಇಷ್ಟರವರೆಗೆ ನಾವೂ ತಲೆ ತಗ್ಗಿಸಿದ್ದೇವೆ. ಇನ್ನು ಮುಂದೆ ಹಾಗೇ ಆಗಲ್ಲ ಎಂದು SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸಿಗರನ್ನು ಆಸ್ಪತ್ರೆಗೆ ಕಳುಹಿಸೋದು ಗೊತ್ತು. ನಮ್ಮ ಬಳಿ ಎರಡು ಎಂ ಇದೆ. ಒಂದು ಮ್ಯಾನ್ ಪವರ್ ಮತ್ತೊಂದು ಮಸಲ್ ಪವರ್. ಇನ್ನೆಲ್ಲಿಯಾದರೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಮುಟ್ಟಿದ್ರೆ ಒಂದು ಎಂ ಬಳಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಸ್ ಡಿ ಪಿ ಐ ಮುಖಂಡನ ಭಾಷಣ ವೈರಲ್ ಆಗಿದ್ದು, ಅದರಲ್ಲಿ ಕಾಂಗ್ರೆಸ್ ನವರ ವಿರುದ್ಧ ಆಕ್ರೋಶದ ನುಡಿ ನುಡಿದಿರುವುದು ಕಂಡು ಬಂದಿದೆ. ನಮ್ಮ ಸುದ್ದಿಗೆ ಬಂದರೆ ಆಸ್ಪತ್ರೆಗೆ ಕಳುಹಿಸೋದು ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸೋದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *