ಭಾರತೀಯ ಮೂಲದ ಗಗನಯಾತ್ರಿ ಸುನೀಯಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ಹೋಗಿ ಬಹಳಷ್ಟು ಸಮಯವಾಗಿದೆ. ಆದಷ್ಟು ಬೇಗ ಅವರು ಭೂಮಿಗೆ ಬರಲಿ ಎಂದೇ ದೇಶದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಯಾಕೆಂದರೆ ಆ ಇಬ್ಬರು ಗಗನಯಾತ್ರಿಗಳು ಅಲ್ಲಿ ಆರಾಮವಾಗಿ ಏನು ಇಲ್ಲ. ತಾಂತ್ರಿಕ ದೋಷದಿಂದ ಭೂಮಿಗೆ ಬರಬೇಕಾದವರು ಬಾಹ್ಯಾಕಾಶದಲ್ಲಿಯೇ ಸಿಲುಕಿದ್ದಾರೆ. ಊಟ ನಿದ್ರೆಯಿಲ್ಲದೆ ಗಾಳಿಯಲ್ಲಿಯೇ ತೇಲುತ್ತಿದ್ದಾರೆ. ಹೀಗಾಗಿ ನಾಸಾ ಕೂಡ ಸಾಧ್ಯವಾದಷ್ಟು ಭೂಮಿಗೆ ಕರೆತರುವ ಪ್ರಯತ್ನ ಮಾಡುತ್ತಿದೆ. ಆದರೆ ಎಷ್ಟೇ ಪ್ರಯತ್ನಿಸಿದರು ಆ ಇಬ್ಬರು ಭೂಮಿಗೆ ಬರುವುದು ಮುಂದಿನ ವರ್ಷಕ್ಕೇನೆ.
https://x.com/Unexplained2020/status/1830352770362438078?t=nNo1v0Ar7AEgXxRdNpJVfQ&s=19
ಸದ್ಯ ಒಂದು ಶಾಕಿಂಗ್ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಸಾ ಸದ್ಯ ನಿರಂತರವಾಗಿ ಇಬ್ಬರ ಸಂಪರ್ಕದಲ್ಲಿ ಇದೆ. ಬುಜ್ ವಿಲ್ಮೋರ್ ಜೊತೆಗೆ ನಾಸಾ ಮಾತನಾಡುತ್ತಿರುವಾಗ ಏನೋ ವಿಚಿತ್ರ ಶಬ್ಧವೊಂದು ಕೇಳಿಸಿದೆ. ಕೇಳುವುದಕ್ಕೇನೆ ಕರ್ಕಶವಾದ ಶಬ್ದವಾಗಿದೆ.
ಇದರ ಬಗ್ಗೆ ವಿಲ್ಮೋರ್ ವಿವರಣೆ ನೀಡಿದ್ದಾರೆ. ಈ ವಿಚಿತ್ರ ಶಬ್ಧ ಜಲಾಂತರ್ಗಾಮಿ ಸೋನಾರ್ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್ ಮಾಡುತ್ತಿರುವ ಧ್ವನಿ ಎಂದು ವಿವರಣೆ ನೀಡಿದ್ದಾರೆ. ನಾಸಾದ ಮಿಷನ್ ಕಂಟ್ರೋಲ್ ಕೂಡ ಈ ಧ್ವನಿಯನ್ನು ಪತ್ತೆ ಹಚ್ಚಿದೆ. ಇದು ಸೋನಾರ್ ಶಬ್ಧ ಎಂಬುದನ್ನು ತಿಳಿಸಿದೆ. ಸದ್ಯ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೀರ್ ಬಾಹ್ಯಾಕಾಶಕ್ಕೆ ತೆರಳಿ ಮೂರು ತಿಂಗಳಾಗಿದೆ. ಕೇವಲ ಒಂದು ವಾರಕ್ಕೆ ಎಂದು ಹೋದವರು ತಾಂತ್ರಿಕ ದೋಷದಿಂದ ಅಲ್ಲಿಯೇ ಉಳಿಯುವಂತೆ ಆಗಿದೆ. ಆದಷ್ಟು ಬೇಗ ಇಬ್ಬರು ಭೂಮಿಗೆ ಬರಲಿ ಎಂದೇ ಹಾರೈಸುತ್ತಿದ್ದಾರೆ.