ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
ಏಪ್ರಿಲ್ 20, 2026ರಂದು ಜಪಾನಿನ ಉತ್ತರ ಕಾರಾವಳಿಯಲ್ಲಿ (ಇವಾಬೆ ಪ್ರಾಂತ್ಯದ ಬಳಿ) 7.7 ರಿಕ್ಟರ್ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪಕ್ಕೆ ಕಾರಣವಾದ ವಿವರಗಳು ಇಂತಿವೆ.
ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಾಗಿದೆ. ಇದರ ಕೇಂದ್ರ ಬಿಂದು ಹೊನ್ನ ದ್ವೀಪದ ಉತ್ತರ ಕಾರಾವಳಿಯ ಇವಾಬೆ ಪ್ರಾಂತ್ಯದ ಸಮುದ್ರದಲ್ಲಿ ಸುಮಾರು 10 ರಿಂದ 19 ಕಿ.ಮೀ. ಆಳದಲ್ಲಿ ಸಂಭವಿಸಿದೆ ಮತ್ತು 3 ಮೀಟರ್ ಎತ್ತರದ ಸುನಾಮಿ ಅಲೆಗಳ ಎಚ್ಚರಿಕೆ ನೀಡಲಾಗಿದೆ. ನಂತರ ಅದು 80 ಸೆಂ.ಮೀ.ಗೆ ಇಳಿಕೆಯಾಯಿತು ಎಂಬುದನ್ನು ಜಪಾನ್ ಹವಾಮಾನ್ ಸಂಸ್ಥೆ (JHA) ವರದಿ ಮಾಡಿದೆ. ಹೆಚ್ಚಿನ ಸಾವಿನ ನೋವುಗಳು ವರದಿಯಾಗಿಲ್ಲ, ಆದರೆ ಕೆಲವು ಮನೆಗಳಿಗೆ ಹಾನಿ ಮತ್ತು ಬುಲೆಟ್ ರೈಲು ಸೇವೆಗಳು ಸ್ಥಗಿತಗೊಂಡಿವೆ.
ಜಪಾನ್‌ನಲ್ಲಿ ಪದೇ ಪದೇ ಭೂಕಂಪಗಳು ಸಂಭವಿಸಲು ಮುಖ್ಯಕಾರಣ, ಅದರ ಭೂವೈಜ್ಞಾನಿಕ ಸ್ಥಾನ ಜಪಾನಿನ ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮದಲ್ಲಿ ಪೆಸಿಫಿಕ್ ಪ್ಲೇಟ್ ಜಪಾನಿನ ಅಡಿಯಲ್ಲಿರುವ ಒಕೂಟ್ ಮೈಕ್ಲೋ ಪ್ಲೇಟಿನ ಕೆಳಗೆ ಸಾಗುತ್ತಿದೆ. ಈ ಪ್ರಕ್ರಿಯೆಯಿಂದ ಪ್ಲೇಟ್‌ಗಳು ಒಂದರ ಮೋಲೊಂದು ನುಗ್ಗಿ ಅಪಾರ ಒತ್ತಡವನ್ನು ಮತ್ತು ಶಾಖವನ್ನು ಉಂಟುಮಾಡಿದೆ. ಜಪಾನ್ ಪೆಸಿಫಿಕ್ ಸಾಗರದ ರಿಂಗ್ ಆಫ್ ಪೈರ್ ವಲಯದಲ್ಲಿದೆ. ಅಲ್ಲಿ ವಿಶ್ವದ ಶೇ. 75ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸುತ್ತಿವೆ.
ಇತ್ತೀಚಿನ ಭೂಕಂಪವು ಜಪಾನಿನ ಟ್ರಂಚ್ ಎಂಬ ಕಡಲಾಚೆಯ ಪ್ರದೇಶದಲ್ಲಿ ತೀವ್ರ ಒತ್ತಡದಿಂದ ಸಂಭವಿಸಿದೆ. ಈ ಭಾಗದಲ್ಲಿ 2011ರ ದೂಹೊಕ, ಭೂಕಂಪ ಕೂಡ ಸಂಭವಿಸಿತ್ತು ಎಂಬುದು ವರದಿಗಳಿಂದ ತಿಳಿದುಬಂದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












