Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಾಲೆ ಜ್ಞಾನ ದೇಗುಲ, ಮಕ್ಕಳು ದೇವರಿದ್ದಂತೆ : ಶ್ರೀಮತಿ ಶ್ವೇತಾ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
               ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 :  ಶಾಲೆ ಮಕ್ಕಳಿಗೆ ಜ್ಞಾನದ ದೇಗುಲ ಇದ್ದಂತೆ. ಇಲ್ಲಿ ಕಲಿಯುವ ಮಕ್ಕಳು ದೇವರಿದ್ದಂತೆ. ಇವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಕ್ಲಸ್ಟ್‌ರ್‌ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶ್ವೇತಾ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಾಸ ವಿದ್ಯಾ ಸಂಸ್ಥೆಯ 2023-24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆ ಮಕ್ಕಳ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಇದಕ್ಕೆ ಶಿಕ್ಷಕರು ಮತ್ತು ಪೋಷಕರು ಸಹಾಯವನ್ನು ಮಾಡಬೇಕಿದೆ. ಮಕ್ಕಳು ಸುಸಂಸ್ಕೃತವಾದ ಮತ್ತು ಗ್ರಂಥಿಕ ಭಾಷೆಯನ್ನು ಕಲಿಯಬೇಕಿದೆ. ಇದ್ದಲ್ಲದೆ ವೈಜ್ಞಾನಿಕವಾಗಿ ವ್ಯವಹಾರಿಕ ಜ್ಞಾನವನ್ನು ಸಹಾ ನೀಡಬೇಕಿದೆ. ಶಾಲಾ ಪಠ್ಯದ ಜೊತೆಗೆ ಇತರೆ ಚಟುವಟಿಕೆಗಳನ್ನು ಸಹಾ ಕಲಿಸಬೇಕಿದೆ ಇದೊಂದು ಜ್ಞಾನದ ದೇಗುಲವಾಗಿ ಮಕ್ಕಳಿಗೆ ಮಾರ್ಪಾಡಾಗಬೇಕಿದೆ ಎಂದರು.

ವಿಕಾಸ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಬಿ.ವಿಜಯಕುಮಾರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಈ ರೀತಿಯಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಕರೋನದಿಂದಾಗ ಕಳೆದ ಎರಡು ವರ್ಷ ನಡೆಸಿರಲಿಲ್ಲ, ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಉತ್ತಮವಾ ಭೋದನೆಯನ್ನು ಮಾಡುವುದರ ಮೂಲಕ ಮಕ್ಕಳನ್ನು ದೇಶದ ಮುಂದಿನ ಉತ್ತಮ ಪ್ರಜೆಗಳಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾರವರು ಶಾಲಾ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಶಿಕ್ಷಕಿಯಾದ ಲತಾ ಸ್ವಾಗತಿಸಿದರೆ, ವಸುಂಧರ ವಂದಿಸಿದರು, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ, ನಂತರ ಮಕ್ಕಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!