ಬೆಂಗಳೂರು; ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಹುಲಿ ಹಾಗೂ ಎಸ್ಸಿ, ಎಸ್ಟಿ ವಿಚಾರ ಚರ್ಚೆಗೆ ಬಂದಿದೆ. ವಿಪಕ್ಷ ನಾಯಕರು ಎಸ್ಸಿ, ಎಸ್ಟಿ ಹಣ ಬೇರೆಯದ್ದಕ್ಕೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಸದನದಲ್ಲಿಯೇ ಚರ್ಚೆ ಶುರು ಮಾಡಿದರು. ಆರ್.ಅಶೋಕ್ ಅವರು ಕಾಡಿನಲ್ಲ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ಸಿ, ಎಸ್ಟಿ ಹಣವನ್ನ ಬಳಸುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ.ಖಾದರ್, ಅಲ್ಲಿಯೂ ಎಸ್ಸಿ, ಎಸ್ಟಿ ಸಮುದಾಯದವರು ಇದ್ದಾರೆ. ಫಾರೆಸ್ಟ್ ಏರಿಯಾದಲ್ಲಿ ಇದಾರೆ ಅಲ್ವಾ. ಅವರಿಗೆ ಆ ಹಣ ಕೊಟ್ಟಿದ್ದಾರೆಂದು ಆರ್.ಅಶೋಕ್ ಪ್ರಶ್ನೆಗೆ ಉತ್ತರ ನೀಡಿದರು. ಆದರೆ ಸ್ಪೀಕರ್ ಮಾತನ್ನು ವಿಪಕ್ಷ ನಾಯಕರು ಒಪ್ಪಲಿಲ್ಲ. ವಯನಾಡಿನವರಿಗೆ ಆ ಹಣವನ್ನ ಕೊಟ್ಟಿದ್ದು ಎಂದೇ ವಾಗ್ದಾಳಿ ನಡೆಸಿದರು. ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಜೋರು ಮಾಡಿದರು. ಕಾಡಿನಲ್ಲೇನಾದ್ರೂ ಲಿಂಗಾಯತ, ಬ್ರಾಹ್ಮಣ, ದಲಿತ ಹುಲಿಗಳು ಇವೆಯಾ..? ಎಂದು ಹೇಳುತ್ತಾ ಸ್ಪೀಕರ್ ಕಾಲೆಳೆದರು.

ಬಳಿಕ ಸ್ಪೀಕರ್ ಯು.ಟಿ ಖಾದರ್ ಅವರು ಸರಿ ಆ ಮಾತನ್ನ ನಾನು ಹಿಂದೆ ತೆಗೆದುಕೊಂಡಿದ್ದೇನೆ. ಚರ್ಚೆ ಬೇಡ. ನೀವೂ ಮಾತಾಡಿ ಎಂದರೂ ಕೇಳದ ಯತ್ನಾಳ್ ಹುಲಿ ರಕ್ಷಣೆಗಾಗಿ ಕೊಟ್ಟ ಹಣದ ಬಗ್ಗೆ ಅದೇ ಮಲವಾದ ಮಾಡುತ್ತಿದ್ದರು. ಆಗ ಯು.ಟಿ.ಖಾದರ್ ಆಯ್ತು ಅದನ್ನ ಬಿಟ್ಟು ಬಿಡಿ. ನೀವೋದಾಗ ನಿಮಗೆ ಬೇರೆ ಕೊಡೋಣಾ. ಅದನ್ಯಾಕೆ ಚರ್ಚೆ ಮಾಡೋಣಾ. ನನ್ನ ಆಲೋಚನೆಯಲ್ಲಿ ಹೇಳಿದೆ. ಅದನ್ನ ಮುಗಿಸ್ತಾ ಇದ್ದೀನಿ. ಯತ್ನಾಳ್ ಅವರೇ ಕುಳಿತುಕೊಳ್ಳಿ ಎಂದು ಖಾದರ್ ಹೇಳಿದರು. ಈ ಚರ್ಚೆ ಮಾತ್ರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು.

