ಕೈಯಲ್ಲಿ ಒಂದಷ್ಟು ಹಣವಿದ್ದರೆ ಆ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿ, ಬಡ್ಡಿ ಬರುವಂತೆ ಮಾಡಿಕೊಳ್ಳುತ್ತೀವಿ. ಆದರೆ ಆ ಬಡ್ಡಿ ತುಂಬಾ ದೊಡ್ಡ ಮಟ್ಟಕ್ಕೇನು ಬರಲ್ಲ. ಆದರೆ ಈಗ ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಖುಷಿಯಾಗುವಂತ ಯೋಜನೆಯನ್ನು ತಂದಿದೆ. ಅದುವೇ ‘ಅಮೃತ್ ಕಲಶ’ ಯೋಜನೆ.
ಈ ಯೋಜನೆ ಮುಂಚೆ ಕೂಡ ಇತ್ತು. ಇದೀಗ SBI ಮರಳಿ ತಂದಿದೆ. ಇದರ ಅವಧಿ 400 ದಿನಗಳದ್ದಾಗಿದೆ. ಇದಕ್ಕೆ ಸೇರುವ ಮೂಲಕ ಗ್ರಾಹಕರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ. ಬೇರೆ ಎಫ್ಡಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಈ ಮೂಲಕ ಪಡೆಯಬಹುದು.
ಈಗಾಗಲೇ ಈ ಯೋಜನೆ ಫೆಬ್ರವರಿಯಿಂದಾನೇ ಆರಂಭವಾಗಿದೆ. ಈ ತಿಂಗಳ ಕೊನೆ ಅಂದ್ರೆ ಏಪ್ರಿಲ್ 31ರವರೆಗೆ ಲಭ್ಯವಿದೆ. ನಂತರ ಯೋಜನೆಯ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ ಮತ್ತೆ ಈ ಯೋಜನೆಯನ್ನು ಮರಳಿ ತರುತ್ತಿದೆ. ಏಪ್ರಿಲ್ 12ರಿಂದ 7.1 ರ ಬಡ್ಡಿದರವನ್ನು ಇದು ನೀಡಲಿದೆ. ಹಿರಿಯ ನಾಗರಿಕರಿಗೆ ಇನ್ನು ಹೆಚ್ಚಿನ ಬಡ್ಡಿ ದರ ಸಿಗಲಿದ್ದು, 7.6 ರಷ್ಟು ಬಡ್ಡಿ ದರ ಹೆಚ್ಚಳವಾಗಲಿದೆ. ಈ ಅಮೃತ ಕಲಶ ಯೋಜನೆಯೂ ಜೂನ್ 30ರಿಂದ 2023ರವರೆಗೆ ಲಭ್ಯವಿರಲಿದೆ.