ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು ಆರೋಗ್ಯಕರ ಗುಟ್ಟು ಕೂಡ ಅಡಗಿದೆ. ಇದನ್ನ ತಿನ್ನುವುದರಿಂದ ಕೆಲ ಕಾಯಿಲೆಗಳಿಂದಾನು ದೂರವಿರಬಹುದು. ಹಾಗಾದ್ರೆ ಈ ಕರಿಬೇವಿನ ಎಲೆಗಳನ್ನ ಯಾವ ಸಮಸ್ಯೆ ಇರುವವರು ಹೆಚ್ಚಾಗಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ ತಿಳಿದ ಮೇಲೆ ಖಂಡಿತ ತಟ್ಟೆಯಲ್ಲಿ ಕರಿಬೇವು ಕಂಡರೆ ಎಸೆಯುತ್ತಿದ್ದವರು, ಇನ್ಮುಂದೆ ಹೊಟ್ಟೆಗೆ ಹಾಕಿಕೊಳ್ಳೋದು ಗ್ಯಾರಂಟಿ.

* ಈ ಕರಿಬೇವಿನಲ್ಲಿ ರೈಬೋ ಫ್ಲೆವನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವೂ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಹೆಚ್ಚಿನ ಅಂಶವನ್ನು ಹೊಂದಿದೆ.

* ಪ್ರತಿದಿನ ಬೆಳಗ್ಗೆ ಮೂರರಿಂದ ನಾಲ್ಕು ಎಲೆ ಕರಿಬೇವನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ರೀತಿ ಮೂರು ತಿಂಗಳು ಮಾಡಬೇಕು. ಆಗ ನಿಮಗೆ ಅಸಿಡಿಟಿ ಸಮಸ್ಯೆ ಏನಾದರೂ ಇದ್ದರೆ ಮಾಯವಾಗುತ್ತದೆ.
* ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಕೂಡ ಸಿಗಲಿದೆ. ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.
* ಬಿಪಿ ಹೆಚ್ಚಾದವರು ಕೂಡ ಇದನ್ನ ತಿನ್ನಬಹುದು. ಕರಿಬೇವು ತಿನ್ನುವುದರಿಂದ ಕಂಟ್ರೊಲ್ ಗೆ ಬರಲಿದೆ
* ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವವರಿಗು ಕರೊಬೇವು ರಾಮಬಾಣವಿದ್ದಂತೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ.
* ಅಷ್ಟೇ ಅಲ್ಲ ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಜೀರ್ಣಕ್ರಿಯೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಒಂದಿಂಚು ಶುಂಠಿ, ಕಲ್ಲುಪ್ಪು, ಕರಿಬೇವು ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ಕರಿಬೇವನ್ನ ತಿನ್ನೋದ್ರಿಂದ ನಿಮ್ಮ ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ