Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಬಹುದು : ಕೆ.ಎನ್.ರಾಜಣ್ಣ ಹೊಸ ಬಾಂಬ್

---Advertisement---

ತುಮಕೂರು: ನಿನ್ನೆಯಷ್ಟೇ ಆಗಸ್ಟ್ – ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ್ದಂತ ಕೆ.ಎನ್.ರಾಜಣ್ಣ ಅವರು ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಬಹುದು ಅಂತ ಹೇಳಿವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಕ್ರಾಂತಿ ಆಗುತ್ತಾ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ನಾನು ಹೇಳಿದ ಕೂಡಲೇ ಕಾಂಗ್ರೆಸ್ ನಲ್ಲಿ ಕ್ರಾಂತಿಯಾಗಲ್ಲ, ಬಿಜೆಪಿಯಲ್ಲಿ ಕ್ರಾಂತಿಯಾಗುತ್ತೆ ಎಂದು ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

ರಾಜಕೀಯ ನಿಂತ ನೀರಲ್ಲ. ತಗ್ಗು ಇರುವ ಕಡೆ ನೀರು ಹರಿದು ಹೋಗುತ್ತದೆ. ನಾನೇಳಿದ್ದು ಸೆಪ್ಟೆಂಬರ್ ನಲ್ಲಿ. ಈಗಲೇ ಅದೆಲ್ಲ ಹೇಳೋದಕ್ಕೆ ಆಗುತ್ತಾ. ಕ್ರಾಂತಿ ಅಂದ್ರೆ ಎಷ್ಟು ಥರದ ಕ್ರಾಂತಿ ಇದೆ. ಜಗಜೀವನ್ ರಾವ್ ಮಾಡಲಿಲ್ವಾ ಹಸಿರು ಕ್ರಾಂತಿ ಅಂತ. ಅದು ನಿಮಗೆಲ್ಲ ಲೆಕ್ಕಕ್ಕೆ ಬರೋದಿಲ್ಲ. 19-19 ಅಲ್ಲಿ ಆಯ್ತಲ್ಲ, ಅದು ಅಕ್ಟೋಬರ್ ನಲ್ಲಿಯೇ ತಾನೇ ಆಗಿರೋದು. ನಾನೇಳಿದಾಕ್ಷಣ ಕಾಂಗ್ರೆಸ್ ನಲ್ಲಿಯೇ ಆಗ್ತಾ ಇದೆ ಅಂದುಕೊಳ್ಳೋದಲ್ಲ. ಯಾಲೆ ಬಿಜೆಪಿಯಲ್ಲಿ ಆಗ್ತಾ ಇಲ್ವಾ. ಈಗ ಕೇಂದ್ರ ಸರ್ಕಾರದಲ್ಲೂ ಬದಲಾವಣೆಗಳನ್ನ ನಿರೀಕ್ಷೆ ಮಾಡಬಹುದು.

ಆರ್ ಎಸ್ ಎಸ್ ಅವರದ್ದು ಸೆಟ್ ಆಫ್ ಪ್ರಿನ್ಸಿಪಲ್ಸ್ ಇದೆ. 75 ವರ್ಷದ ಬಳಿಕ ಯಾರೂ ಕೂಡ ಜವಾಬ್ದಾರಿ ಸ್ಥಾನದಲ್ಲಿ ಬರಬಾರದು ಎಂಬ ದೃಷ್ಠಿಯಿಂದ ಅಡ್ವಾಣಿ ಅವರನ್ನ ದೂರವಿಟ್ಟು ಮೋದಿ ಅವರು ಬಂದ್ರು. ಈಗ ಅದೇ ಪ್ರಿನ್ಸಿಪಲ್ ಇವರಿಗೂ ಆಗುತ್ತಲ್ಲ. ಅದು ಬದಲಾವಣೆ ಆದರೆ ಕ್ರಾಂತಿಯಾದಂತೆ ಅಲ್ವಾ. ಅದನ್ಯಾರು ಊಹೆ ಮಾಡೋದಿಲ್ವಾ. ಕರ್ನಾಟಕದಲ್ಲಿ ಬರೀ ಕಾಂಗ್ರೆಸ್ ಕ್ರಾಂತಿ, ಪ್ರೆಸಿಡೆಂಟ್ ಬದಲಾಯಿಸ್ತಾರೆ, ಸಂಪುಟ ಪುನರ್ ರಚನೆಯಾಗುತ್ತೆ, ಸಿಎಂ ಬದಲಾಗುತ್ತಾರೆ. ಬರೀ ಇಂತವೇ ಚರ್ಚೆಯಾಗುತ್ತಿವೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment