Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸತೀಶ್ ಜಾರಕಿಹೊಳಿ ಭವಿಷ್ಯದ ಸಿಎಂ : ಸಾಹುಕಾರ್ ಉತ್ತರವೇನು..?

---Advertisement---

ಬೆಳಗಾವಿ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ವಿಚಾರವೇ ಸಾಕಷ್ಟು ಚರ್ಚೆಯಾಗ್ತಾ ಇದೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೋಸ್ಕರ ಕಾಯ್ತಾ ಇದ್ರೆ, ಇತ್ತ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೂಡ ಕೇಳಿಸ್ತಾ ಇದೆ‌. ಅದರಲ್ಲೂ ಸತೀಶ್ ಜಾರಕಿಹೊಳಿ ಅವರನ್ನ ಭವಿಷ್ಯದ ಸಿಎಂ ಅಂತಾನೇ ಅಂತಿದ್ದಾರೆ. ಅದಕ್ಕೆ ಸತೀಶ್ ಜಾರಕಿಹೊಳಿ ಕೊಟ್ಟ ಉತ್ತರ ಹೀಗಿದೆ.

ಬೆಳಗಾವಿಯಲ್ಲಿ ಮಾತನ್ನಾಡಿದ ಸತೀಶ್ ಜಾರಕಿಹೊಳಿ, ಈಗಾಗಲೇ ನಿಮ್ಮ ಪ್ರಶ್ನೆಗಳಿಗೆ ಬೆಂಗಳೂರಿನಲ್ಲಿಯೇ ಉತ್ತರ ಸಿಕ್ಕಿದೆ. ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಕಾದು ನೋಡೋಣಾ. ಭವಿಷ್ಯದಲ್ಲಿ ಆಗ್ತಾರೆ ಅಂತ ಹೇಳಿರೋದು ನಾಳೆ ಅಲ್ಲ ಎಂದಿದ್ದಾರೆ. ಬಹುತೇಕ ಸಚಿವರ್ಯಾರು ಕೆಲಸ ಮಾಡ್ತಾ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಒಂದು ಕಡೆ ಆಗುತ್ತೆ, ಕೆಲವೊಂದು ಕಡೆ ಆಗಿಲ್ಲ. ಕೆಲವೊಂದು ಕಡೆ ಬಸ್ ಕೊಟ್ಟಿದ್ದಾರೆ. ಸಿಟಿಗೆ ಕೂಡ ನೂರು ಬಸ್ ಕೊಡ್ತಾ ಇದ್ದಾರೆ. ಬೆಂಗಳೂರಿನಲ್ಲಿದ್ದರೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರೋದಿಲ್ಲ ಇಲಾಖೆ. ಬೆಂಗಳೂರಿನಾದ್ಯಂತ ಮಾಡ್ತಾರೆ. ವಿಳಂಬ ಆಗ್ತಾ ಇರಬಹುದು ಅಷ್ಟೇ ಎಂದಿದ್ದಾರೆ.

ಒಳ ಮೀಸಲಾತಿ ಬಗ್ಗೆ ಮಾತನ್ನಾಡಿ, ಸದ್ಯಕ್ಕೆ ಒಳ ಮೀಸಲಾತಿ ಜಾರಿ ಇಲ್ಲ. ತಡೆ ಹಿಡಿದವರು ಯಾರು. ಕೋರ್ಟ್ ತಡೆ ಹಿಡಿದಿರೋದು. ನ್ಯಾಯಾಲಯದಲ್ಲಿ ಇರುವ ಕಾರಣ ತಡೆಹಿಡಿಯಲಾಗಿದೆ. ಮುಂದೆ ಅದು ಅಂತಿಮ ಆದೇಶ ಬಂದ ಮೇಲೆ ಏನಾಗುತ್ತೆ ಅನ್ನೋದನ್ನ ನೋಡೋಣಾ. ಪದೇ ಪದೇ ಖುರ್ಚಿಯದ್ದೇ ಮಾತನ್ನಾಡೋದು ಬೇಡ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಗುತ್ತಾ ಮುಂದೆ ಸಾಗಿದ್ದಾರೆ. ಈ ಖುರ್ಚಿ ಕಾದಾಟ 2028ರ ಎಲೆಕ್ಷನ್ ಬರುವ ತನಕ ಹಾಗೇ ಇರುತ್ತಾ ಎಂಬ ಅನುಮಾನವೂ ಎಲ್ಲರನ್ನ ಕಾಡ್ತಾ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now