Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಒಂದೇ ಕುಟುಂಬದ 9 ಜನರ ಹುಟ್ಟು ಹಬ್ಬ ಒಂದೇ ದಿನ : ನಂಬಿದ್ರೆ ನಂಬಿ, ಬಿಟ್ರೆ ಬಿಡಿ : ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಕುಟುಂಬ

---Advertisement---

ಜನ್ಮದಿನವು ಎಲ್ಲರಿಗೂ ತುಂಬಾ ವಿಶೇಷ ದಿನವಾಗಿದೆ. ಆದರೆ ಅದೇ ದಿನ ನಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬವೂ ಇದ್ದರೆ ಆ ಮಜಾನೇ ಬೇರೆ. ಖುಷಿ ದುಪ್ಪಟ್ಟಾಗುತ್ತದೆ. ಒಂದೇ ಕುಟುಂಬದ 9 ಜನರ ಹುಟ್ಟು ಹಬ್ಬ ಒಂದೇ ದಿನವಾಗಿದ್ದರೆ ಇದೆಂತ ವಿಸ್ಮಯ.  ಶಾಕ್ ಆಗ್ತೀರಾ ? ಇದು ಸತ್ಯ. ಆ ಕುಟುಂಬದ 9 ಸದಸ್ಯರು ಒಂದೇ ದಿನಾಂಕದಂದು ಜನಿಸಿದರು. ಅವರು ಪ್ರತಿ ವರ್ಷ ಸಾಮೂಹಿಕವಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಇದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅದು ಯಾರ ಕುಟುಂಬ? ಅವರು ಎಲ್ಲಿದ್ದಾರೆ? ಎಂಬುದನ್ನು ತಿಳಿದುಕೊಳ್ಳೋಣ.

ಸುದ್ದಿಒನ್

ಒಂದು ಕುಟುಂಬದಲ್ಲಿ 9 ಜನರ ಹುಟ್ಟು ಹಬ್ಬ ಒಂದೇ ದಿನ ಬರುತ್ತವೆ ಎಂದು ಯಾರಾದರೂ ಊಹಿಸಬಹುದೇ? ಅದು ಕೂಡ ಹೆಂಡತಿ ಗಂಡ, ಮತ್ತು ಅವರ ಏಳು ಮಕ್ಕಳು ಒಂದೇ ದಿನಾಂಕದಂದು ಜನಿಸಿದ್ದಾರೆ. ಆದರೆ ಅವರು ಬೇರೆ ಬೇರೆ ವರ್ಷಗಳಲ್ಲಿ ಜನಿಸಿದರೂ, ತಿಂಗಳು ಮತ್ತು ದಿನಾಂಕ ಒಂದೇ ದಿನ ಆಗಿರುವುದು ವಿಶೇಷ. ಅದು ನಿಜವಾಗಿಯೂ ಸಾಧ್ಯಾನಾ ? ಎಂದು ಆಶ್ಚರ್ಯ ಪಡುವುದರಲ್ಲಿ ತಪ್ಪೇನಿಲ್ಲ.ಆದರೂ ಇದು ನಂಬಲೇಬೇಕಾದ ಸತ್ಯ.

ಇದು ವಿಚಿತ್ರವೆನಿಸಿದರೂ ನಿಜ.
ಹಾಗಾಗಿಯೇ ಈ ಕುಟುಂಬ ಗಿನ್ನೆಸ್ ದಾಖಲೆಗೆ ಸೇರಿದೆ. ಈ ಅಪರೂಪದ ಘಟನೆಗೆ ಸಾಕ್ಷಿಯಾದ ಕುಟುಂಬ ಇರುವುದು ಪಾಕಿಸ್ತಾನದಲ್ಲಿ. ಇದರ ಇನ್ನೊಂದು ವಿಶೇಷತೆ ಏನೆಂದರೆ ಇದೇ ದಿನ ಈ ಜೋಡಿ ಮದುವೆಯಾದದ್ದು.

ಪಾಕಿಸ್ತಾನದ ಲರ್ಕಾನಾದ ಅಮೀರ್ ಅಲಿ ಅವರ ಕುಟುಂಬ ಈ ದಾಖಲೆಯನ್ನು ಹೊಂದಿದೆ. ಅಮೀರ್ ಅಲಿ ಮತ್ತು ಅವರ ಪತ್ನಿ ಖುಡೇಜಾ ಅವರೊಂದಿಗೆ ಅವರ ಏಳು ಮಕ್ಕಳು ಒಂದೇ ದಿನಾಂಕದಂದು ಜನಿಸಿದ್ದಾರೆ.

ಅಮೀರ್-ಖುಡೇಜಾ ದಂಪತಿಯ ಏಳು ಮಕ್ಕಳ ವಯಸ್ಸು 19 ರಿಂದ 30 ವರ್ಷಗಳು. ಇದರ ಇನ್ನೊಂದು ವಿಶೇಷತೆ ಏನೆಂದರೆ ಅಮೀರ್-ಖುಡೇಜಾ ಮದುವೆ ದಿನವೂ ಇದೇ ಆಗಿದೆ. ಆದರೆ ಅವರಿಗೆ ಹುಟ್ಟಿದ ಮಗು ನಿಗದಿತ ಸಮಯಕ್ಕೆ ಸರಿಯಾಗಿಯೇ ಜನಿಸಿದ್ದಾರೆಯೇ ಹೊರತು ನಾವು ಸಮಯ ಮತ್ತು ದಿನಾಂಕಕ್ಕೆ ಅನುಗುಣವಾಗಿ ಹೆರಿಗೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಅಪರೂಪದ ಸಾಧನೆ ಮಾಡಿದ ಕುಟುಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಇದಕ್ಕಾಗಿ ಅವರಿಗೆ ಪ್ರಮಾಣಪತ್ರವನ್ನೂ ನೀಡಲಾಗಿದೆ. ಆ ಕುಟುಂಬದ ಎಲ್ಲಾ 9 ಸದಸ್ಯರು ಬೇರೆ ಬೇರೆ ವರ್ಷಗಳಲ್ಲಿ ಆಗಸ್ಟ್ 1 ರಂದು ಜನಿಸಿದ್ದಾರೆ.

ಹುಟ್ಟುಹಬ್ಬವನ್ನು ಒಂದೇ ದಿನದಲ್ಲಿ ಆಚರಿಸಲು ನಾವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಮೀರ್ ಅಲಿ ಹೇಳುತ್ತಾರೆ. ಆದರೆ ಇದೆಲ್ಲ ದೇವರ ದಯೆ ಎಂದರು. ತಮ್ಮ ಕುಟುಂಬಕ್ಕೆ ಈ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಸಿಕ್ಕಿರುವುದಕ್ಕೆ ದೇವರಿಗೆ ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಅಮೀರ್ ಅಲಿ-ಖುಡೇಜಾ ಅವರು ಹೊಂದಿದ್ದ ಏಳು ಮಕ್ಕಳಲ್ಲಿ ಎರಡು ಬಾರಿ ಅವಳಿ ಮಕ್ಕಳು ಜನಿಸಿದ್ದಾರೆ. ಪ್ರತಿ ಆಗಸ್ಟ್ 1 ರಂದು ಅವರ ಇಡೀ ಕುಟುಂಬವು ಅವರ ಹುಟ್ಟುಹಬ್ಬ ಮತ್ತು ಅವರ ಮದುವೆಯ ದಿನವನ್ನು ಆಚರಿಸುತ್ತದೆ.

ಅಲ್ಲದೇ ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವುದು ಆ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ನಮ್ಮ ಹುಟ್ಟುಹಬ್ಬದ ಬಗ್ಗೆ ಎಲ್ಲರಿಗೂ ತಿಳಿಯುತ್ತಿದೆ ಎಂದು ಅವರು ಹೇಳಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...