Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಸಂತ ಶ್ರೀ ಸೇವಾಲಾಲ್ : ಖಂಡೂ ಬಂಜಾರ

---Advertisement---

 

 

ಚಿತ್ರದುರ್ಗ. ಫೆ.15: ಭೂಮಿಯ ಮೇಲಿರುವ ಸಕಲ ಜೀವರಾಶಿಗಳಿಗೂ ಒಳ್ಳೆಯದನ್ನೇ ಬಯಸಿದವರು ಸಂತ ಶ್ರೀ ಸೇವಾಲಾಲ್ ಎಂದು ಕೊಳಹಾಳ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಾಗೂ ಸಾಹಿತಿ ಖಂಡೂ ಬಂಜಾರ (ಬಿ.ಕೆ.ನಾಯ್ಕ್) ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಇರುವವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಲೇಸನ್ನು ಬಯಸಿದ ಸಂತ ಸೇವಾಲಾಲ್ ಅವರು, ಮರ ಕಡೆದು ಜೀವ ಇಲ್ಲದಿರುವ ಒಣಗಿದ ಬಡ್ಡೆಯೂ ಸಹ ಚಿಗುರೊಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಏಕೈಕ ವ್ಯಕ್ತಿ ಎಂದು ಹೇಳಿದರು.

ನಮ್ಮ ದೇಹದಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಸುಟ್ಟು ಹಾಕಬೇಕು.  ಸತ್ಯ ಮತ್ತು ಧರ್ಮವನ್ನು ಮುನ್ನಡೆಸಬೇಕು. ಜೊತೆಗೆ ನಿಮಗೆ ಕೈಲಾದರೆ ಹಸಿದವರಿಗೆ ಅನ್ನ, ನೀರು ಕೊಡಿ ಎಂಬ ಸಂದೇಶವನ್ನು ಸಂತ ಸೇವಾಲಾಲ್ ಅವರು ಸಾರಿದ್ದಾರೆ ಎಂದರು.

ಸಂತ ಶ್ರೀ ಸೇವಾಲಾಲ್ ಅವರ ತತ್ವಾದರ್ಶ, ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಿಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಬಂಜಾರ ಎಂಬುವುದು ಒಂದು ಜಾತಿ ಅಲ್ಲ. ಅದೊಂದು ಸಂಸ್ಕøತಿ. ಅವರ ಕರಕುಶಲತೆ ವಿಭಿನ್ನ ಹಾಗೂ ವಿಶಿಷ್ಟ, ಸೃಜನಶೀಲತೆಯಿಂದ ಕೂಡಿದೆ ಎಂದು ಹೇಳಿದರು.

ಬಂಜಾರ ಸಮುದಾಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಮ್ಮ ದುಡಿಮೆಯ ಜೊತೆಗೆ ಸರ್ಕಾರದ ಮೀಸಲಾತಿ, ಸೌಲಭ್ಯ ಸದ್ಭಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಮಾರ್ಪಾಡು ಸಾಧ್ಯ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಮಾತನಾಡಿ, ಸಮುದಾಯ ಹಾಗೂ ಇತಿಹಾಸದ ಉಳಿವಿಗಾಗಿ ಸಂಘಟನೆ ಅವಶ್ಯಕವಾಗಿದೆ. ಸಂಸ್ಕøತಿ, ಸಂಸ್ಕಾರ ಉಳಿಸಿಕೊಂಡು ಮುಂದಿನ ಪೀಳಿಗೆ ಕೊಂಡ್ಯೊಯುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಾರ್ಶನಿಕರು, ಸಮಾಜ ಸೇವಕರು, ಪಾವಡ ಪುರುಷರು, ಗೋಪಾಲಕರು, ಸಂತರು, ಶ್ರೇಷ್ಟರೂ ಎನಿಸಿಕೊಂಡಿರುವ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದರು.

ಎಲ್ಲ ಜನಾಂಗದಲ್ಲಿಯೂ ಶ್ರೇಷ್ಟ ದಾರ್ಶನಿಕರು ಹುಟ್ಟಿ ತಮ್ಮ ಜ್ಞಾನವನ್ನು ಜನಾಂಗಕ್ಕೆ ಹಾಗೂ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಸಂತ ಶ್ರೀ ಸೇವಾಲಾಲ್ ಅವರು ಮಹಾಜ್ಞಾನಿಯೂ ಹಾಗೂ ತ್ರಿಕಾಲ ಜ್ಞಾನಿ ಎಂತಲೂ ಕರೆಯುತ್ತೇವೆ ಎಂದರು.
ನಮ್ಮ ಬಂಜಾರ ಭಾಷೆ ಇಡೀ ವಿಶ್ವದಲ್ಲಿಯೇ ಒಂದು ತರನಾಗಿದೆ ಎಂದು ತಿಳಿಸಿದ ಅವರು, ಅನೇಕ ಲಾವಣಿ ಪದಗಳು, ಲಂಬಾಣಿ ನೃತ್ಯಗಳು, ಭಜನೆ ಹೀಗೆ ಅನೇಕ ಬಂಜಾರ ಸಂಸ್ಕøತಿಯ ಮೂಲಕ ಸಂತ ಶ್ರೀ ಸೇವಾಲಾಲ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ ಮಾತನಾಡಿ, ಮೂರು ಶತಮಾನಗಳ ಹಿಂದೆಯೇ ಸಮಾಜವನ್ನು ಸಂಘಟಿಸಿರುವಂತಹ ಮಹಾನ್ ಗುರುಗಳಾದ ಸೇವಾಲಾಲ್ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಸರ್ಕಾರದ ಸವಲತ್ತು ಪಡೆಯಲು ಸಹ ನಾವು ಸಂಘಟನೆಯಾಗಬೇಕು. ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಕೊಟ್ಟಾಗ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ, ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಕೊಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,  ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಗೌರವಾಧ್ಯಕ್ಷ ಜಿ.ರಾಜನಾಯ್ಕ, ಮುಖಂಡರಾದ ಮಾಧವ ನಾಯ್ಕ್, ಪ್ರಕಾಶ್ ರಮಾನಾಯ್ಕ್, ವಸಂತ್ ನಾಯ್ಕ್, ರಮೇಶ್ ನಾಯ್ಕ್, ದುರ್ಗ ನಾಯ್ಕ್, ರಮೇಶ್ ನಾಯ್ಕ್, ಸುಮೀತ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಹೊಸದುರ್ಗ ತಾಲ್ಲೂಕು ಪೀಲಾಪುರ ಗ್ರಾಮದ ಕಂಠೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...